<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..C73FD478C9F579E52032CB9C2B9E7CB4..12237")> ಶಿಮ್ಲಾ: ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ. : 3.98% . . . . ‘ಹಿಮಾಚಲ ಪ್ರದೇಶದ ವಿಧಾನಸಭೆ (ಸದಸ್ಯರ ಭತ್ಯೆ ಹಾಗೂ ಪಿಂಚಣಿ) ತಿದ್ದುಪಡಿ ಕಾಯ್ದೆ 2024’ಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಈ ವರ್ಷ ಫೆಬ್ರುವರಿಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಗೈರು ಹಾಜರಾದ ಹಾಗೂ ವಿಪ್ ಉಲ್ಲಂಘಿಸಿದ ಆರು ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು, ಅವರ ಮೇಲೆ ಈ ಹೊಸ ಕಾನೂನಿನ ಪರಿಣಾಮ ಬೀರಲಿದೆ. ಇಂಥ ಮಸೂದೆಗೆ ಒಪ್ಪಿಗೆ ನೀಡಿದ ದೇಶದ ಮೊದಲ ರಾಜ್ಯ ಎನ್ನುವ ಶ್ರೇಯ ಹಿಮಾಚ ಪ್ರದೇಶದ ಪಾಲಾಗಿದೆ. ಈ ಮಸೂದೆಯನ್ನು ‘ರಾಜಕೀಯ ಸೇಡು‘ ತೀರಿಸಿಕೊಳ್ಳುವ ಕ್ರಮ ಎಂದು ವಿರೋಧ ಪಕ್ಷ ಬಿಜೆಪಿ ಹೇಳಿದೆ. ಅಲ್ಲದೆ ಈ ಹಿಂದಿನ ಘಟನೆಗಳಿಗೆ ಇದು ಅನ್ವಯವಾಗದು ಎಂದಿದೆ. ‘ಸಂವಿಧಾನದ 10ನೇ ‍‍ಪರಿಚ್ಚೇದದಡಿ ಯಾವುದೇ ಸಮಯದಲ್ಲಿ ವ್ಯಕ್ತಿಯು ಅನರ್ಹಗೊಂಡಿದ್ದರೆ ಪಿಂಚಣಿಗೆ ಅರ್ಹರಾಗಿರುವುದಿಲ್ಲ’ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಮಸೂದೆಗೆ ರಾಜ್ಯಪಾಲರ ಸಹಿ ಬಿದ್ದರೆ ಅಧಿಕೃತ ಕಾನೂನು ಆಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.