<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..EE4AD941764D7FEAF2AF9F2422CBD9B3..1569")> ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೊ ಯಾತ್ರೆಯು ಪಕ್ಷಕ್ಕೆ ‘ದೊಡ್ಡ ಬೂಸ್ಟರ್ ಡೋಸ್‌’, ಅದರಿಂದಾಗಿ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗಳು ಉಂಟಾದವು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. : 2.92% . . . . ‘ಭಾರತ್ ಜೋಡೊ ಯಾತ್ರೆ ಆರಂಭವಾಗಿ ಇಂದು ಎರಡು ವರ್ಷ. ರಾಹುಲ್ ಗಾಂಧಿ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಯಾತ್ರಿಗಳು 4000 ಕಿಲೋಮೀಟರ್ ದೂರದ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿತು. 145 ದಿನಗಳಲ್ಲಿ, 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದಗಳಲ್ಲಿ ಸಂಚರಿಸಿತು’ ಎಂದು ಹೇಳಿದ್ದಾರೆ. ‘ಈ ಯಾತ್ರೆಯು ಅಭೂತಪೂರ್ವ ಸಂಪರ್ಕ ಮತ್ತು ಸಾಮೂಹಿಕತೆಗೆ ಕಾರಣವಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಭಾರಿ ಬೂಸ್ಟರ್ ಡೋಸ್ ಆಗಿತ್ತು. ಇದು ನಮ್ಮ ದೇಶದ ರಾಜಕೀಯದಲ್ಲೂ ಬದಲಾವಣೆಗೆ ನಾಂದಿ ಹಾಡಿತು’ ಎಂದು ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.