<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..1547628D1BFAA93E180F339D08B13D4F..41884")> ನವದೆಹಲಿ: ಈಚೆಗೆ ನಡೆದ ಲೋಕಸಭಾ ಚುನಾವಣೆಯ ವೆಚ್ಚಕ್ಕಾಗಿ ಸಿಪಿಎಂ, ಅತಿಹೆಚ್ಚು ಹಣವನ್ನು ಮುಕೇಶ್‌ ಅವರಿಗೆ ನೀಡಿದೆ. ಕೊಲ್ಲಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರಿಗೆ ₹ 79 ಲಕ್ಷ ನೀಡಲಾಗಿದೆ ಎಂದು ಪಕ್ಷವು ಸಲ್ಲಿಸಿರುವ ‘ಚುನಾವಣಾ ವೆಚ್ಚದ ವರದಿ’ ತಿಳಿಸಿದೆ. : 3.98% . . . . ಲೋಕಸಭಾ ಚುನಾವಣಾ ಖರ್ಚಿಗೆ ಪಕ್ಷದಿಂದ ಹೆಚ್ಚಿನ ಹಣ ಲಭಿಸಿದರೂ, ಅವರಿಗೆ ಆರ್‌ಎಸ್‌ಪಿಯ ಎನ್‌.ಕೆ.ಪ್ರೇಮಚಂದ್ರನ್‌ ಅವರನ್ನು ಮಣಿಸಲು ಅಗಿರಲಿಲ್ಲ. ಕೇರಳದಿಂದ (ಆಲತ್ತೂರ್ ಕ್ಷೇತ್ರ) ಗೆದ್ದಿರುವ ಸಿಪಿಎಂನ ಏಕೈಕ ಸಂಸದ ಕೆ.ರಾಧಾಕೃಷ್ಣನ್‌ ಅವರಿಗೆ ಪಕ್ಷವು ₹ 37.40 ಲಕ್ಷ ನೀಡಿದೆ. ಎಡಪಕ್ಷದಿಂದ ಗೆದ್ದಿರುವ ಇತರ ಮೂವರು ಸಂಸದರಿಗೂ ಚುನಾವಣಾ ವೆಚ್ಚಕ್ಕೆ, ಮುಕೇಶ್‌ ಅವರಿಗಿಂತ ಕಡಿಮೆ ಹಣ ನೀಡಲಾಗಿದೆ. ಆರ್‌.ಸಚ್ಚಿದಾನಂದನ್ (ತಮಿಳುನಾಡಿನ ದಿಂಡಿಗಲ್ ಕ್ಷೇತ್ರ) ಅವರಿಗೆ ₹ 70.63 ಲಕ್ಷ, ಎಸ್‌.ವೆಂಕಟೇಶನ್ (ತಮಿಳುನಾಡಿನ ಮದುರೈ) ಅವರಿಗೆ ₹ 36.99 ಲಕ್ಷ ಹಾಗೂ ಅಮ್ರಾ ರಾಮ್ (ರಾಜಸ್ಥಾನದ ಸೀಕರ್) ಅವರಿಗೆ ₹ 10 ಲಕ್ಷ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.