<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..763CB54758865D2E720E344DCC51F14A..40461")> ನವದೆಹಲಿ: ಎನ್‌ಜಿಒಗಳ ನೋಂದಣಿ ನವೀಕರಣ ಮಾಡುವುದಾಗಿ ಹೇಳಿ, ತನ್ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ವಿಭಾಗದ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ. : 3.98% . . . . ನಕಲಿ ಲಾಂಛನ, ಅಧಿಕಾರಿಗಳ ನಕಲಿ ಇ–ಮೇಲ್‌ ಐಡಿ ಬಳಸಿ, ಎಫ್‌ಸಿಆರ್‌ಎ ವಿಭಾಗದ ಅಧಿಕಾರಿಗಳ ಹೆಸರಿನಲ್ಲಿ ಖೊಟ್ಟಿ ಇ–ಮೇಲ್‌ ಸಂದೇಶಗಳನ್ನು ಕಳುಹಿಸಿ, ಹಣ ಕೇಳಲಾಗುತ್ತಿದೆ. ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರುವಂತೆ ಸಚಿವಾಲಯ ತಿಳಿಸಿದೆ. ವೈಯಕ್ತಿಕ ಮಾಹಿತಿ ಅಥವಾ ಹಣ ಪಾವತಿ ಕೋರಿಕೆಯ ಪತ್ರಗಳು/ಇ–ಮೇಲ್‌ಗಳಿಗೆ ಜನರು ಪ್ರತಿಕ್ರಿಯೆ ನೀಡಬಾರದು ಎಂದೂ ತಿಳಿಸಿದೆ. ನೋಂದಣಿ, ನವೀಕರಣ, ಈಗಾಗಲೇ ನೀಡಿರುವ ಮಾಹಿತಿಯಲ್ಲಿ ಬದಲಾವಣೆಗೆ ಮತ್ತು ಪೂರ್ವಾನುಮತಿ ಸೇರಿದಂತೆ ಯಾವುದೇ ಸೇವೆಗಾಗಿ ಅಧಿಕೃತ ಪೋರ್ಟಲ್ ://.../ ಸಂಪರ್ಕಿಸುವಂತೆ ಕೋರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.