ಸಂವಿಧಾನ ಮಿತಿ ಮೀರಬೇಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ ನವದೆಹಲಿ: ‘ರಾಜ್ಯ ಸರ್ಕಾರಗಳು ಸಂವಿಧಾನದ ಮಿತಿಯನ್ನು ಮೀರಿ ಯಾವುದೇ ವಿಷಯಗಳಲ್ಲಿ ಮಧ್ಯ ಪ್ರವೇಶಿಸಬಾರದು’ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಕೇರಳ ಸರ್ಕಾರವು ಅಧಿಕಾರಿಯೊಬ್ಬರಿಗೆ ‘ವಿದೇಶಾಂಗ ಸಹಕಾರ’ ಹೊಣೆಗಾರಿಕೆ ನಿಗದಿಪಡಿಸಿದ ಬೆನ್ನಿಗೇ ಸಚಿವಾಲಯದ ವಕ್ತಾರ ರಣ್‌ಧೀರ್ ಜೈಸ್ವಾಲ್ ಈ ಮಾತು ಹೇಳಿದರು. ‘ಸಂವಿಧಾನದ 7ನೇ ಶೆಡ್ಯೂಲ್‌ನ ಪಟ್ಟಿ–1 ಒಕ್ಕೂಟದ ಪಟ್ಟಿಯ 10ನೇ ಅಂಶವು ಈ ವಿಷಯದಲ್ಲಿ ಸ್ಪಷ್ಟವಾಗಿದೆ. ವಿದೇಶಗಳಿಗೆ ಸಂಬಂಧಿಸಿದ ಯಾವುದೇ ವಿಷಯವು ಒಕ್ಕೂಟ ಸರ್ಕಾರದ ವಿವೇಚನಾಧಿಕಾರವಾಗಿದೆ’ ಎಂದು ಉಲ್ಲೇಖಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.