ಬಿಹಾರ: ಶಾಲೆಗೆ ಗನ್ ತಂದು ಬಾಲಕನ ಮೇಲೆ ಗುಂಡು ಹಾರಿಸಿದ ನರ್ಸರಿ ವಿದ್ಯಾರ್ಥಿ! ಸುಪಾಲ್, ಬಿಹಾರ: ನರ್ಸರಿ ಶಾಲೆ ವಿದ್ಯಾರ್ಥಿಯೊಬ್ಬ ಶಾಲೆಗೆ ಹ್ಯಾಂಡ್‌ಗನ್ ತಂದಿದ್ದಲ್ಲದೇ ಅದೇ ಶಾಲೆಯಲ್ಲಿನ ಮೂರನೇ ತರಗತಿ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿರುವ ಆತಂಕಕಾರಿ ಘಟನೆ ಮಂಗಳವಾರ ಬಿಹಾರದ ಸುಪಾಲ್ ಜಿಲ್ಲೆಯ ಲಾಲ್‌ಪಟ್ಟಿ ಎಂಬಲ್ಲಿ ನಡೆದಿದೆ. ಗಾಯಗೊಂಡಿರುವ 10 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ‍ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸಿದ ಬಾಲಕ 5 ವರ್ಷದವನಾಗಿದ್ದು ಅದೇ ಶಾಲೆಯ ನರ್ಷರಿ ವಿಭಾಗದಲ್ಲಿ ಓದುತ್ತಿದ್ದ ಎಂದು ಹೇಳಿದ್ದಾರೆ. ನರ್ಸರಿ ಬಾಲಕ ಹಾರಿಸಿದ ಗುಂಡಿನಿಂದ ಬಾಲಕನ ಬಲ ತೋಳಿಗೆ ಗಾಯವಾಗಿದೆ. ಆತ ಬ್ಯಾಗ್‌ನಲ್ಲಿ ಗನ್ ಇಟ್ಟುಕೊಂಡು ಬಂದಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಎಸ್. ಯಾದವ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.