ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು | ಅಸ್ಸಾಂ ಪ್ರವಾಹ: 880 ಮಂದಿ ಸಾವು ಅಸ್ಸಾಂ ಪ್ರವಾಹ: 880 ಮಂದಿ ಸಾವು ‘ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ ಒಟ್ಟು 880 ಮಂದಿ ಮೃತಪಟ್ಟಿದ್ದಾರೆ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ವರ್ಷ;ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 2019;157 2020;190 2021;73 2022;278 2023;65 2024 (ಜುಲೈವರೆಗೆ);117 ಒಟ್ಟು;880 ಈಶಾನ್ಯ ರಾಜ್ಯಗಳು: 592 ಭೂಕುಸಿತಗಳು ‘ಈಶಾನ್ಯ ರಾಜ್ಯಗಳಲ್ಲಿ ಕಳೆದ ಏಳು ವರ್ಷಗಳಲ್ಲಿ ಸಂಭವಿಸಿದ ಭೂಕುಸಿತಗಳ ಸಂಖ್ಯೆಯನ್ನು ಗಮನಿಸಿದರೆ, ಈ ವರ್ಷದ ಏಪ್ರಿಲ್‌–ಜುಲೈ ತಿಂಗಳಲ್ಲೇ ಹೆಚ್ಚಿನ ಭೂಕುಸಿತ ಸಂಭವಿಸಿದೆ. ಕಳೆದ ಏಳು ವರ್ಷಗಳಲ್ಲಿ 396 ಭೂಕುಸಿತ ಸಂಭವಿಸಿದ್ದರೆ, ಈ ವರ್ಷದಲ್ಲಿಯೇ 196 ಇಂಥ ಘಟನೆಗಳು ಸಂಭವಿಸವೆ’ ಎಂದು ಭೂ ವಿಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದರು. ‘ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ’ವು ಈ ಸಮೀಕ್ಷೆ ನಡೆಸಿದೆ. ಯಾಕಾಗಿ ಇಂಥ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ, ಇದರ ಗುಣಲಕ್ಷಣಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಸುಮಾರು 20 ವರ್ಷಗಳ ದತ್ತಾಂಶಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕಿದೆ’ ಎಂದು ಸಚಿವರು ಹೇಳಿದರು. (ವರ್ಷ;ಈಶಾನ್ಯ ರಾಜ್ಯಗಳಲ್ಲಿ‌ ಸಂಭವಿಸಿದ ಭೂಕುಸಿತಗಳ ಸಂಖ್ಯೆ) 2017-18;28 2018-19;49 2019-20;45 2020-21;65 2021-22;78 2022-23;102 2023-24;29 2024-25 (ಏಪ್ರಿಲ್‌–ಜುಲೈ ಅವಧಿ);196 ಒಟ್ಟು;592 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.