ತಿರುಪತಿ: ₹125 ಕೋಟಿ ಕಾಣಿಕೆ ಸಂಗ್ರಹ ತಿರುಪತಿ(ಆಂಧ್ರಪ್ರದೇಶ): ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಜುಲೈನಲ್ಲಿ ₹125 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್‌ ಶುಕ್ರವಾರ ಹೇಳಿದ್ದಾರೆ. ‘ಜುಲೈನಲ್ಲಿ 22 ಲಕ್ಷ ಯಾತ್ರಾರ್ಥಿಗಳು ದೇಗುಲಕ್ಕೆ ಭೇಟಿ ನೀಡಿದ್ದು, 8.6 ಲಕ್ಷ ಭಕ್ತರು ಮುಡಿ ಕೊಡುವ ಹರಕೆ ತೀರಿಸಿದ್ದಾರೆ. ದೇವಸ್ಥಾನವು ಕೋಟಿಗೂ ಅಧಿಕ ಲಡ್ಡುಗಳನ್ನು ಮಾರಾಟ ಮಾಡಿದೆ’ ಎಂದೂ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.