ಬರೇಲಿ: ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರ ಕೊಲೆ! ಸರಣಿ ಹಂತಕನ ರೇಖಾಚಿತ್ರ ಬಿಡುಗಡೆ ಬರೇಲಿ, ಉತ್ತರ ಪ್ರದೇಶ: ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೇಲಿ ಜಿಲ್ಲಾ ಪೊಲೀಸರು ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ರೇಖಾಚಿತ್ರದಲ್ಲಿ ಹೋಲುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೇ ಕೂಡಲೇ ಮಾಹಿತಿ ನೀಡಲು ವಿನಂತಿ ಮಾಡಿಕೊಂಡಿದ್ದಾರೆ. ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಈ ಕೊಲೆಗಳನ್ನು ಬೇರೆ ಬೇರೆಯವರು ಮಾಡಿರಬಹುದು ಎಂದು ಮೊನ್ನೆ ಅಂದಾಜಿಸಿದ್ದರು. ಆದರೆ, ಸದ್ಯ ಈ ಎಲ್ಲ ಕೊಲೆಗಳನ್ನು ಒಬ್ಬನೇ ಮಾಡಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಂತಕ ಕಬ್ಬಿನ ಗದ್ದೆಯಲ್ಲಿ ಸೀರೆ ಬಳಸಿ ಕುತ್ತಿಗೆಗೆ ಸುತ್ತಿ ಮಹಿಳೆಯರನ್ನು ಕೊಲೆ ಮಾಡುತ್ತಿದ್ದ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿರುವ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಎಲ್ಲ ಮೃತದೇಹಗಳು ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕೊಲೆಗಳನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸರಣಿ ಹಂತಕನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದಾರೆ. ಬರೇಲಿಯ ಐಜಿಪಿ ರಾಕೇಶ್‌ ಸಿಂಗ್‌ ಅವರು ಸ್ವತಃ ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ. ‘ಎಲ್ಲಾ ಒಂಬತ್ತು ಕೊಲೆಗಳಲ್ಲಿ ಸಾಮ್ಯತೆ ಇವೆ. ಸ್ಥಳೀಯ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ. ಈ ನಿಷ್ಕ್ರಿಯತೆ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ. ➡️थाना शाही क्षेत्रान्तर्गत पूर्व में मिले महिलाओं के शव के संबंध में हुयी पुलिस छानबीन व आसपास के लोगों से प्राप्त जानकारी के अनुसार तीन संदिग्धों के स्केच जारी किये गये हैं। कृपया स्केच की पहचान कर टेम्पलेट में दिये गये मोबाइल नम्बरों पर सूचना देने का कष्ट करें। # ../XqXG4JRNe6 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.