ಹಾಜಿ ಅಲಿ ದರ್ಗಾ ನವೀಕರಣ: ₹1.2 ಕೋಟಿ ದೇಣಿಗೆ ನೀಡಿದ ನಟ ಅಕ್ಷಯ್‌ ಕುಮಾರ್ ಮುಂಬೈ: ನಗರದ ಹಾಜಿ ಅಲಿ ದರ್ಗಾ ನವೀಕರಣ ಯೋಜನೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ₹1.21 ಕೋಟಿ ದೇಣಿಗೆ ನೀಡಿದ್ದಾರೆ. ದರ್ಗಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಸುಹೇಲ್‌ ಖಂಡ್ವಾನಿ ಅವರು ‘ಎಕ್ಸ್‌’ನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದಾರೆ. ಐತಿಹಾಸಿಕ ದರ್ಗಾಕ್ಕೆ ಅಕ್ಷಯ್‌ ಕುಮಾರ್‌ ಭೇಟಿ ನೀಡಿದ್ದು, ಈ ಕುರಿತ ವಿಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಈ ದರ್ಗಾದಲ್ಲಿ ಸಯ್ಯದ್ ಪೀರ್‌ ಹಾಜಿ ಅಲಿ ಶಾ ಬುಖಾರಿ ಅವರ ಸಮಾಧಿ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.