ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಶಾಸಕ ಸುರೇಶ್ ಬಾಬು ಆಯ್ಕೆ ಜೆಡಿಎಸ್ ಶಾಸಕ ಸಿಬಿ ಸುರೇಶ್ ಬಾಬು ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು: ಜೆಡಿಎಸ್ ಶಾಸಕ ಸಿಬಿ ಸುರೇಶ್ ಬಾಬು ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾಧ್ಯಕ್ಷ ಯುಟಿ ಖಾದರ್ ಈ ಮಾಹಿತಿಯನ್ನು ಸದನದಲ್ಲಿ ಇಂದು ಘೋಷಿಸಿದರು.ಈ ಹಿಂದೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿದ್ದಾರೆ.ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿಬಿ ಸುರೇಶ್ ಬಾಬು ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ, ಇದನ್ನು ಮಾನ್ಯ ಮಾಡಬೇಕೆಂದು ಮನವಿ ಮಾಡಿ ಎಂದು ಜು.14 ರಂದು ಪತ್ರ ಪ್ರಕಟಿಸಿದ್ದರು."ಹೆಚ್ ಡಿ ಕುಮಾರಸ್ವಾಮಿ ಅವರ ಪತ್ರವನ್ನು ಪರಿಗಣಿಸಿದ ಖಾದರ್ ಸಿಬಿ ಸುರೇಶ್ ಬಾಬು ಅವರನ್ನು ಜೆಡಿಎಸ್ ಎಲ್ ಪಿ ನಾಯಕರೆಂದು ಘೋಷಿಸಿದ್ದಾರೆ.