ನೀವು ಮತ ಹಾಕದಿದ್ದರೆ, ನಿಮಗೆ ದೂರುವ ಹಕ್ಕು ಇರುವುದಿಲ್ಲ: ಶಾರೂಕ್ ಖಾನ್ ನಟನೆಯಿಂದ ಮೂರು ತಿಂಗಳು ವಿರಾಮ ಪಡೆದಿರುವ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ದಿನದಲ್ಲಿ 5 ಗಂಟೆ... ಚೆನ್ನೈ: ನಟನೆಯಿಂದ ಮೂರು ತಿಂಗಳು ವಿರಾಮ ಪಡೆದಿರುವ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ದಿನದಲ್ಲಿ 5 ಗಂಟೆ ವ್ಯಾಯಾಮ ಮಾಡುವುದರಲ್ಲಿ ಕಳೆಯುತ್ತಾರೆ.ನಿನ್ನೆ ಭಾನುವಾರ ಅವರು ಮತ ಚಲಾಯಿಸುವ ಹಕ್ಕಿನ ಬಗ್ಗೆ ಮಾತನಾಡಿದರು.ತಮಿಳುನಾಡಿನ ಶ್ರೀ ಪೆರುಂಬದೂರಿನಲ್ಲಿ ಹುಂಡೈ ಘಟಕದ 20ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ದೇಶದ ಬರಗಾಲದಿಂದ ಹಿಡಿದು ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಪ್ರದರ್ಶನದ ಬಗ್ಗೆ ಮಾತನಾಡಿದರು. ಅವರ ಸಂದರ್ಶನದ ಆಯ್ದ ಭಾಗಗಳು: ಪ್ರಶ್ನೆ: ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ ಸದ್ಯದಲ್ಲಿಯೇ ಇದೆ. ಮತ ಹಾಕುವ ಬಗ್ಗೆ ನೀವೇನು ಹೇಳುತ್ತೀರಿ? ಉತ್ತರ: ನೀವು ಉಸಿರಾಡುವ ಮುನ್ನ, ತಿನ್ನುವ ಮುನ್ನ ಮತ ಕಡ್ಡಾಯವಾಗಿ ಹಾಕಬೇಕು. ಯಾರು ಆಯ್ಕೆಯಾಗಿ ಬರುತ್ತಾರೋ, ಅವರು ಉತ್ತಮ ಆಯ್ಕೆ ಎಂದು ನಂಬಬೇಕು. ಶೇಕಡಾ 60 ರಷ್ಟು ಮಂದಿ 35 ವರ್ಷ ವಯಸ್ಸಿಗಿಂತ ಕೆಳಗಿರುವ ನಮ್ಮ ದೇಶದಲ್ಲಿ ಅವರ ಅಭಿಪ್ರಾಯ ಮುಖ್ಯವಾಗುತ್ತದೆ. ಹಾಗಾಗಿ ನಾನು ವಯಸ್ಸಾದವರಿಗಿಂತ ಯುವ ಜನಾಂಗದವರನ್ನು ಮನವಿ ಮಾಡಿಕೊಳ್ಳುತ್ತೇನೆ, ನೀವು ಮತ ಹಾಕದಿದ್ದರೆ ಯಾರ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳ ಬಗ್ಗೆಯೂ ದೂರುವ ಕಾರಣಗಳಿರುವುದಿಲ್ಲ. ಹಾಗಾಗಿ ಹೋಗಿ ಮತ ಹಾಕಿ, ನಿಮಗೆ ಇಷ್ಟಬಂದ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ, ಆಮೇಲೆ ನಿಮಗೆ ಇಷ್ಟವಿದ್ದರೆ ದೂರಿ. ನೀವು ಯಾವುದಾದರೊಂದರ ಭಾಗವಾಗಿರದಿದ್ದರೆ ಆರೋಪ ಮಾಡಲು ನಿಮಗೆ ಅಧಿಕಾರವಿರುವುದಿಲ್ಲ. ಪ್ರಶ್ನೆ: ಕಳೆದೊಂದು ತಿಂಗಳಿನಿಂದ ಐಪಿಎಲ್ ನಡೆಯುತ್ತಿದೆ. ಎಷ್ಟು ಪಂದ್ಯಗಳನ್ನು ಗೆದ್ದುಕೊಳ್ಳಲು ಸಾಧ್ಯವಾಯಿತು? ಉತ್ತರ: ನಾನು ಇಲ್ಲಿಂದ ಕೋಲ್ಕತ್ತಾಗೆ ಹೋಗಲಿದ್ದೇನೆ ಯಾಕೆಂದರೆ ನನ್ನ ಆಟಗಾರರಿಗೆ ಅಲ್ಲಿಗೆ ಬರುತ್ತೇನೆಂದು ಪ್ರಾಮಿಸ್ ಮಾಡಿದ್ದೇನೆ. ಇಲ್ಲಿಯವರೆಗೆ, ನಾನು ಒಂದು ಮ್ಯಾಚನ್ನು ಮಾತ್ರ ನೋಡಿದ್ದೇನೆ. ಆದರೆ ಕಳೆದ ವಾರದಿಂದ ಕೆಲ ತಿಂಗಳುಗಳವರೆಗೆ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕೋಲ್ಕತ್ತಾದ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಹೋಗಬೇಕೆಂದಿದ್ದೇನೆ ಇಲ್ಲದಿದ್ದರೆ ಹುಡುಗರು ನನ್ನ ಮೇಲೆ ಆರೋಪ ಮಾಡುತ್ತಾರೆ.(ನಗು) ಪ್ರಶ್ನೆ : ನಿಮ್ಮ ಹತ್ತಿರ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರ? ಉತ್ತರ: ಹೌದು, ನಾನು ಅವರ ಬಟ್ಟೆಗಳನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಚೆನ್ನೈಗೆ ಬರಲು ಯಾವಾಗಲೂ ಇಷ್ಟಪಡುತ್ತಿದ್ದೇನೆ. ಪಂದ್ಯ ವೀಕ್ಷಿಸಲು ಇಲ್ಲಿಗೆ ಬರುವುದು ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು. ಪ್ರಶ್ನೆ: ಈ ಸೀಸನ್ ನಲ್ಲಿ ಐಪಿಎಲ್ ಮ್ಯಾಚ್ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ ಹೌದೇ? ಉತ್ತರ: ಆರಂಭದಲ್ಲಿ ಅವರು ಹಾಗೆಯೇ ಹೇಳುತ್ತಾರೆ. ಆದರೆ ಐಪಿಎಲ್ ಮುಗಿಯುವ ಹೊತ್ತಿಗೆ ವಿವಾದ ಹುಟ್ಟಿಕೊ ಳ್ಳುತ್ತದೆ(ನಗು). ಕಳೆದ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಟಿ-20 ಮ್ಯಾಚ್ ನಡೆಯಿತು. ಕಳೆದ ಸಲ ನಾನು ಈಡನ್ ಗಾರ್ಡನ್ ಗೆ ಹೋದಾಗ ಶೇಕಡಾ 65ರಷ್ಟು ಮಾತ್ರ ವೀಕ್ಷಕರ ಗ್ಯಾಲರಿ ಭರ್ತಿಯಾಗಿತ್ತು, ಏಕೆಂದರೆ ಪಶ್ಚಿಮ ಬಂಗಾಳದ ಚುನಾವಣೆಯಿಂದಾಗಿ. ಮುಂದಿನ ನಾಲ್ಕು ಪಂದ್ಯಗಳಲ್ಲಿ ಭರ್ತಿಯಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಟಿಕೆಟ್ ಮಾರಾಟ ಜಾಸ್ತಿಯಾಗಿದೆ. ಇದು ನನ್ನ ಮೌಲ್ಯಮಾಪನ ಯಾಕೆಂದರೆ ಟಿಕೆಟ್ ಮಾರಾಟದ ಕೊನೆಗೆ ನಾನು ಸಂಖ್ಯೆಗಳನ್ನು ತಿಳಿದುಕೊಳ್ಳುತ್ತೇನೆ. ಪ್ರಶ್ನೆ: ದೇಶದ ಬಹುತೇಕ ರಾಜ್ಯಗಳು ಬರಗಾಲಕ್ಕೆ ತುತ್ತಾಗಿವೆ, ನೀವು ವಾಸಿಸುತ್ತಿರುವ ಮಹಾರಾಷ್ಟ್ರ ರಾಜ್ಯ ಸೇರಿ. ನಿಮ್ಮ ಶೂಟಿಂಗ್ ಸಮಯದಲ್ಲಿ ಬರಗಾಲದ ಸ್ವ ಅನುಭವವಾಗಿದೆಯೇ? ಉತ್ತರ: ನನಗೆ ಸ್ವತಃ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ದೇಶಕ್ಕೆ ಬಂದಿರುವ ಅಪಾರ ಬರಗಾಲ ತುಂಬಾ ಬೇಸರದ ಸಂಗತಿ. ಇದರಿಂದ ಬಡ ರೈತರು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರಪಂಚ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವಾಗ, ನಿಮ್ಮಲ್ಲಿ ಮೊಬೈಲ್ ಫೋನ್ ಇರುವಾಗ ನಾವೆಲ್ಲರೂ ಈ ಜಲ ಸಂಪನ್ಮೂಲವನ್ನು ಇಂದಿಗೂ ಅವಲಂಬಿಸಿರುವುದು ಭಾರೀ ವೈರುಧ್ಯವೆನಿಸುತ್ತದೆ. ಪ್ರಶ್ನೆ: ಹವಾಮಾನ ಬದಲಾವಣೆಯಿಂದ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಲಿಯನಾರ್ಡೊ ಡಿಕಾಪ್ರಿಯೋ ಸೇರಿದಂತೆ ಎಲ್ಲರೂ ಹೇಳುತ್ತಾರೆ, ನಿಮ್ಮ ಅಭಿಪ್ರಾಯವೇನು? ಉತ್ತರ: ನನ್ನ ಮಕ್ಕಳು ಪರಿಸರ ಅಧ್ಯಯನ ಓದುತ್ತಿರುವುದರಿಂದ ನೀರಿನ ಕೊರತೆ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು. ನಾನು ವೈಯಕ್ತಿಕವಾಗಿ ಹೇಳುವುದೇನೆಂದರೆ, ನೀರನ್ನು ಸಂರಕ್ಷಿಸಲು ನಾವೆಲ್ಲರೂ ಮುತುವರ್ಜಿ ವಹಿಸಬೇಕು. ಚಾರಿಟಿಯಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳುವುದಿಲ್ಲ. ಏಕೆಂದರೆ ನಮ್ಮ ಸಿನಿಮಾಗಳ ಮೂಲಕ ಅದನ್ನು ಮಾಡುತ್ತೇವೆ. ಆದರೆ ಹಣ ಈ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಇದು ನಮಗೊಂದು ಪಾಠವಾಗಬೇಕು, ಏಕೆಂದರೆ ಪ್ರತಿಯೊಬ್ಬರೂ ನೀರನ್ನು ಅವಲಂಬಿಸಿಕೊಂಡಿರುತ್ತಾರೆ.