ಬಾಲಿವುಡ್ ಹಿರಿಯ ನಟಿ ರೇಖಾಗೆ ಯಶ್ ಛೋಪ್ರಾ ಸ್ಮಾರಕ ಪ್ರಶಸ್ತಿ ಚಲನ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಿರಿಯ ಬಾಲಿವುಡ್ ನಟಿ ರೇಖಾ ಅವರಿಗೆ ಮೂರನೇ ಯಶ್ ಛೋಪ್ರಾ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ... ಮುಂಬೈ: ಚಲನ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಿರಿಯ ಬಾಲಿವುಡ್ ನಟಿ ರೇಖಾ ಅವರಿಗೆ ಮೂರನೇ ಯಶ್ ಛೋಪ್ರಾ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಅವರು ರೇಖಾ ಅವರಿಗೆ ಯಶ್ ಛೋಪ್ರಾ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ‘ನಾನು ಈ ಪ್ರಶಸ್ತಿಯನ್ನು ಕೇವಲ ಗೌರವ ಎಂಬುದಾಗಿ ತೆಗೆದುಕೊಳ್ಳುತ್ತಿಲ್ಲ, ಆದರೆ ಪರದೆ ಇನ್ನೂ ಬಿದ್ದಿಲ್ಲ ಎಂಬುದನ್ನು ತಿಳಿಸುವ ಜ್ಞಾಪನೆ ಎಂಬುದಾಗಿ ಪರಿಗಣಿಸಿದ್ದೇನೆ. ಇನ್ನೂ ಉತ್ತಮವಾದದ್ದು ಭವಿಷ್ಯದಲ್ಲಿ ಬರಬೇಕಾಗಿದೆ. ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಇದು ಕೊನೆಯ ಅಧ್ಯಾಯವಲ್ಲ, ಅತ್ಯುತ್ತಮ ಅಧ್ಯಾಯ’ ಎಂದು ರೇಖಾ ಹೇಳಿದರು. 61ರ ಹರೆಯದ ನಟಿ 1981ರಲ್ಲಿ ಛೋಪ್ರಾ ಅವರ ಜೊತೆ ಕೆಲಸ ಮಾಡಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶತೃಘ್ನ ಸಿನ್ಹಾ, ಶ್ರೀದೇವಿ, ಜಯಪ್ರದಾ, ರಣ್ವೀರ್ ಸಿಂಗ್ ಸೇರಿದಂತೆ ಬಾಲಿವುಡ್ ನ ಹಲವು ಗಣ್ಯರು ಭಾಗವಹಿಸಿದ್ದರು. 10 ಲಕ್ಷ ನಗದು ಹಾಗೂ ಚಿನ್ನದ ಪದಕವನ್ನು ಈ ಪ್ರಶಸ್ತಿ ಒಳಗೊಂಡಿದೆ