ಮಹಿಳಾ ದಿನಾಚರಣೆಗೆ ವಿಷಾದ ವ್ಯಕ್ತಪಡಿಸಿದ ಬಾಲಿವುಡ್ ಬೆಡಗಿ ವಿಶ್ವ ಮಹಿಳಾ ದಿನಾಚರಣೆ ಆಚರಣೆಗೆ ವಿಷಾದ ವ್ಯಕ್ತಪಡಿಸಿರುವ ಬಾಲಿವುಡ್ ಕ್ವೀನ್ ಹಾಗೂ ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಪ್ರತಿದಿನ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ... ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಗೆ ವಿಷಾದ ವ್ಯಕ್ತಪಡಿಸಿರುವ ಬಾಲಿವುಡ್ ಕ್ವೀನ್ ಹಾಗೂ ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಪ್ರತಿದಿನ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯವನ್ನು ತಡೆಯಲು ಕೇವಲ ಒಂದು ದಿನ ಆಚರಣೆಯಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಶ್ರದ್ಧಾ ಕಪೂರ್, ಪ್ರತಿ 20 ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಕೇವಲ ಒಂದು ದಿನದ ಆಚರಣೆಯಿಂದ ಪ್ರತಿದಿನ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಪ್ರತಿದಿನವೂ ಈ ಕುರಿತಂತೆ ಹೋರಾಟವನ್ನು ಮುಂದುವರೆಸಬೇಕು ಎಂದಿದ್ದಾರೆ. ಇದೇ ವೇಳೆ ನಿಂದನೆ ಮಾಡುವುದು, ದೌರ್ಜನ್ಯ ವೆಸಗುವುದು ಕಸಕ್ಕಿಂತೆ ಕೀಳಾದಂತಹ ಕೆಲಸ ಎಂದಿರುವ ಅವರು, ದೌರ್ಜನ್ಯದ ವಿರುದ್ಧ ಒಂದು ದಿನ ಆಚರಣೆಯನ್ನು ಬಿಟ್ಟು ಪ್ರತಿನಿತ್ಯ ನಿರ್ಭಯದಿಂದ ಹೋರಾಡಿ. ನಿಮ್ಮಲ್ಲಿರುವ ಭಯವನ್ನು ಹೊರಹಾಕಿ, ತಲೆಯೆತ್ತಿ ಓಡಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.