ಪೀಕೇ ಮೂಡ್! ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿದ್ದ 'ತ್ರೀ ಈಡಿಯಟ್ಸ್'ನ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿದ್ದ 'ತ್ರೀ ಈಡಿಯಟ್ಸ್'ನ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಿರ್ಮಾಪಕ ವಿಧು ವಿನೋದ್ ವಿನೋದ್ ಚೋಪ್ರಾ ಹಾಗೂ ನಾಯಕ ನಟ ಆಮಿರ್ ಖಾನ್ ಪುನಃ ಪ್ರೇಕ್ಷಕರಿಗೆ ಖುಷಿಯ ರಸದೌತಣ ಉಣಬಡಿಸಲು ಬರುತ್ತಿದ್ದಾರೆ. ನಿರ್ಮಾಪಕರ ಡಾರ್ಲಿಂಗ್ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಆಮಿರ್ ಖಾನ್ ಕಾಂಬಿನೇಷನ್ ನ 'ಪಿ.ಕೆ.' ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ.