ವಿವಾಹ-ಪೂರ್ವ ಆಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ಪಾಪ್ ಗಾಯಕ ನಿಖ್ ಜೋನಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ತಯಾರಿ ... ನ್ಯೂಯಾರ್ಕ್: ಪಾಪ್ ಗಾಯಕ ನಿಖ್ ಜೊನಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ತಯಾರಿ ಆರಂಭವಾಗಿದ್ದು ಆಕೆಯ ಸ್ನೇಹಿತರು ಮದುವೆ ಪೂರ್ವ ವಧುವಿಗೆ ಪಾರ್ಟಿ(ಬ್ರೈಡಲ್ ಶವರ್) ಆಯೋಜಿಸಿದ್ದರು. ಕಳೆದ ರಾತ್ರಿ ನ್ಯೂಯಾರ್ಕ್ ನಲ್ಲಿ ನಡೆದ ಈ ಪಾರ್ಟಿಯಲ್ಲಿ ಪ್ರಿಯಾಂಕಾ ದಂತ ಬಿಳಿ ವರ್ಣದ ಮರ್ಚೆಸಾ ಉಡುಪಿನಲ್ಲಿ ಸೊಗಸಾಗಿ ಕಾಣುತ್ತಿದ್ದರು. ಬೆಳ್ಳಿ ಬಣ್ಣದ ಬಲೂನ್ ಪಕ್ಕ ನಿಂತ ಪ್ರಿಯಾಂಕಾ ಬಳಿ ವಧು ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿತ್ತು.ಬ್ರೈಡಲ್ ಶವರ್ ಗೆ ಪ್ರಿಯಾಂಕಾಗೆ ಅಲಂಕಾರ ಮಾಡಿದ್ದ ಕೇಶ ವಿನ್ಯಾಸಕಿ ಮಿಮಿ ಕಟ್ರೆಲ್ಲಾ ಫೋಟೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾಡಿಕೊಂಡ ಕೇಶ ವಿನ್ಯಾಸ ಮತ್ತು ಅಲಂಕಾರ ಸಂದರ್ಭದಲ್ಲಿನ ಫೋಟೋವನ್ನು ಸ್ವತಃ ಪ್ರಿಯಾಂಕಾ ತಮ್ಮ ಇನ್ಸ್ಚಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಆಗಮಿಸಿದ್ದರು.ಪ್ರಿಯಾಂಕಾ ಮತ್ತು ನಿಖ್ ಜೋನಸ್ ರಾಜಸ್ತಾನದ ಮೆಹ್ರಂಗಾರ್ ಕೋಟೆಯಲ್ಲಿ ಡಿಸೆಂಬರ್ ನಲ್ಲಿ ವಿವಾಹವಾಗುವ ಸಾಧ್ಯತೆಯಿದೆ. ಇವರಿಬ್ಬರೂ ಕಳೆದ ಆಗಸ್ಟ್ ನಲ್ಲಿ ಮುಂಬೈಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.