ಕ್ರಿಸ್ಮಸ್ ವೈಭವಕ್ಕೆ ಸಂಭ್ರಮಿಸಿದ ಬಾಲಿವುಡ್ ನಗರಿ ಕ್ರಿಸ್ಮಸ್ ವೈಭವಕ್ಕೆ ಬಾಲಿವುಡ್ ನಗರಿ ಸಂಭ್ರಮಿಸುತ್ತಿದ್ದು, ಬಾಲಿವುಡ್ ತಾರೆಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುವಲ್ಲಿ ನಿರತರಾಗಿದ್ದಾರೆ. ನವದೆಹಲಿ: ಕ್ರಿಸ್ಮಸ್ ವೈಭವಕ್ಕೆ ಬಾಲಿವುಡ್ ನಗರಿ ಸಂಭ್ರಮಿಸುತ್ತಿದ್ದು, ಬಾಲಿವುಡ್ ತಾರೆಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುವಲ್ಲಿ ನಿರತರಾಗಿದ್ದಾರೆ. "ವಿಶ್ವದಲ್ಲಿರುವವರೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ವಕ್ಕೆ ಶಾಂತಿ ಮತ್ತು ಸಂಪನ್ನತೆ ದೊರಕಲಿ.. ಮತ್ತು ಪ್ರೀತಿಯುಳ್ಳವರಿಂದ ಸುತ್ತುವರೆದಿರಲಿ" ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ. ನಿರ್ದೇಶಕ ಕರಣ್ ಜೋಹರ್ ಅವರು "ಎಲ್ಲರಿಗೂ ಮೆರ್ರಿ ಕ್ರಿಸ್ಮಸ್!!! 'ಒಹ್ ವಾಟ್ ಫನ್ ಇಟ್ ಇಸ್ ಟು ರೈಡ್' " ಎಂದು ಬರೆದು ನರ್ಸರಿ ಪದ್ಯದ ಒಂದು ಸಾಲನ್ನು ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್ಮಸ್ ಮರದ ಚಿತ್ರ ಹಂಚಿಕೊಂಡಿರುವ ವಿದ್ಯಾ ಬಾಲನ್ "ಮೆರ್ರಿ ಕ್ರಿಸ್ಮಸ್" ಎಂದು ಎಲ್ಲರಿಗೂ ಶುಭ ಕೋರಿದ್ದಾರೆ. ❤️