ಅಪ್ರಾಪ್ತೆಗೆ 'ಅನುಚಿತವಾಗಿ' ಕಿಸ್ ಮಾಡಿದ ಆರೋಪ: ಟಿವಿ ಶೋ ಗಳಲ್ಲಿ ಪಾಲ್ಗೊಳ್ಳದಿರಲು ಪಪೂನ್ ನಿರ್ಧಾರ ಅಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ವಿವಾದ ಬಗೆಹರಿಯುವವರೆಗೂ ಟಿವಿ ಶೋಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಅಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ವಿವಾದ ಬಗೆಹರಿಯುವವರೆಗೂ ಟಿವಿ ಶೋಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹಿಂದಿ ಗಾಯನ ರಿಯಾಲಿಟಿ ಶೋ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಸ್ಪರ್ಧಿಗಳಲ್ಲಿ ಒಬ್ಬಳಾಗಿದ್ದ ಬಾಲಕಿಗೆ ಪಾಪೊನ್ ಕಿಸ್ ಮಾಡಿದ್ದಾನೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ವಕೀಲ ರುನಾ ಭಯುನ್ ಅವರು ಪೋಸ್ಕೋ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ಅಲ್ಲದೇ ರಾಷ್ಟ್ರೀಯ ಮಕ್ಕಳ ಸಂರಕ್ಷಣೆ ಆಯೋಗಕ್ಕೂ ದೂರು ಸಲ್ಲಿಸಿದ್ದರು ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಅಂಗರಗ್ ಪಪೊನ್, ಇಂತಹ ಕೃತ್ಯಗಳನ್ನು ನಾನು ಮಾಡೋದಿಲ್ಲ,ತಮ್ಮ ಕೆಲಸದ ಬಗ್ಗೆ ಅಪಾರ ಗೌರವವಿದೆ.ಆದರೂ ಈ ವಿವಾದ ಬಗೆಹರಿಯುವ ವರೆಗೂ ಟಿವಿ ಶೋಗಳಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿತಿಳಿಸಿದ್ದಾರೆ. ಕಾನೂನಿನ ಬಗ್ಗೆ ನಂಬಿಕೆ ಹೊಂದಿದ್ದು, ಶೋ ಅರ್ಥಮಾಡಿಕೊಂಡು ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.