ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದು ಏಕೆ? ಕೊನೆಗೂ ಮೌನ ಮುರಿದ ನಟಿ ಪ್ರಿಯಾಂಕಾ ಚೋಪ್ರಾ! ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದರು. ಈ ಮೂಲಕ ಅವರು ಮಗಳನ್ನು ಪಡೆದಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದವು. ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದರು. ಈ ಮೂಲಕ ಅವರು ಮಗಳನ್ನು ಪಡೆದಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದವು.ಪ್ರಿಯಾಂಕಾ –ನಿಕ್‌ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದು ಯಾಕೆ ಎಂಬುದರ ಕುರಿತು ಪರ ವಿರೋಧ ಚರ್ಚೆಗಳು ನಡೆದಿದ್ದವು. ಆದರೆ, ಈ ಕುರಿತು ದಂಪತಿ ಬಹಿರಂಗ ಪ್ರತಿಕ್ರಿಯೆ ನೀಡಿರಲಿಲ್ಲ.ಇದೀಗ ಬಾಡಿಗೆ ತಾಯ್ತನದ ವಿಚಾರವಾಗಿ ಮೌನ ಮುರಿದಿರುವ ಪ್ರಿಯಾಂಕಾ, ಜನರ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.‘ಮಾಲತಿ ಮೇರಿ ಜನಿಸುವಾಗ ನಾನು ಆಪರೇಷನ್ ರೂಂನಲ್ಲಿ ಇದ್ದೆ. ಅವಳು ತುಂಬಾನೇ ಚಿಕ್ಕವಳಾಗಿದ್ದಳು. ನನ್ನ ಕೈಗಿಂತ ಚಿಕ್ಕವಳಿದ್ದಳು. ಮನೆಗೆ ಕರೆತರುವುದಕ್ಕೂ ಮುನ್ನ ಅವಳನ್ನು ನಾವು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದೇವೆ. ನಿತ್ಯ ನಾವು ಆಸ್ಪತ್ರೆಗೆ ತೆರಳುತ್ತಿದ್ದೆವು’ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಸಮಾನ ವೇತನ ಪಡೆದ ಪ್ರಿಯಾಂಕಾ ಚೋಪ್ರಾನಟಿ ತಮಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದಳು. ನನಗೆ ಆರೋಗ್ಯ ಸಮಸ್ಯೆ ಇತ್ತು. ನಮ್ಮ ಮಗುವಿನ ಬಾಡಿಗೆ ತಾಯಿ ತುಂಬಾ ದಯೆ ಉಳ್ಳವರೂ, ಸುಂದರಿಯೂ ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ನೋಡಿಕೊಂಡರು ಎಂದಿದ್ದಾರೆ.ಆದರೆ ತಮಗಿರುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಜನರ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಪ್ರಿಯಾಂಕಾ– ನಿಕ್ ದಂಪತಿ ಮಗಳಿಗೆ ‘ಮಾಲತಿ ಮೇರಿ’ ಎಂದು ಹೆಸರಿಟ್ಟಿದ್ದಾರೆ. ಈ ಮಗು ನಿಗದಿತ ಅವಧಿಗಿಂತ ಮೂರು ತಿಂಗಳು ಮೊದಲೇ ಜನಿಸಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಈ ವಿಚಾರವನ್ನು ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ.