ಸಿನೆಮಾ ಒಟ್ಟಿಗೆ ನೋಡಿದಾಕ್ಷಣ ಡೇಟ್ ಮಾಡುತ್ತಿದ್ದೇವೆ ಎಂದಲ್ಲ: ಸೋನಾಕ್ಷಿ ತೇವಾರ್ ಚಲನಚಿತ್ರದ ತನ್ನ ಸಹನಟ ಅರ್ಜುನ್ ಕಪೂರ್ ಅವರೊಂದಿಗೆ ಪ್ರಣಯ ಸಂಬಂಧ ಇದೆ ಎಂಬ... ಮುಂಬೈ: ತೇವಾರ್ ಚಲನಚಿತ್ರದ ತನ್ನ ಸಹನಟ ಅರ್ಜುನ್ ಕಪೂರ್ ಅವರೊಂದಿಗೆ ಪ್ರಣಯ ಸಂಬಂಧ ಇದೆ ಎಂಬ ವದಂತಿಗಳು ಹಬ್ಬಿರುವ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ನಾವು ಒಟ್ಟಿಗೆ ಕೆಲಸ ಮಾಡಿದಾಕ್ಷಣ ಅಥವಾ ಒಟ್ಟಿಗೆ ಸಿನೆಮಾ ನೋಡಿದಾಕ್ಷಣ ನಾವು ಸಂಬಂಧದಲ್ಲಿದ್ದೇವೆ ಎಂದೇನಿಲ್ಲ ಎಂದಿದ್ದಾರೆ. ಡೇಟಿಂಗ್ ವದಂತಿಗಳಿಗೆ ಪ್ರತಿಕ್ರಿಯಿಸಿದ ಸೋನಾಕ್ಷಿ "ನಾನು ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅದರ ಬಗ್ಗೆ ಬರೆಯುವವರನ್ನೇ ನೀವು ಕೇಳಬೇಕು. ನಾವು ಒಟ್ಟಿಗೆ ಕೆಲಸ ಮಾಡಿದಾಕ್ಷಣ ಅಥವಾ ಒಟ್ಟಿಗೆ ಸಿನೆಮಾ ನೋಡಿದಾಕ್ಷಣ ನಾವು ಸಂಬಂಧದಲ್ಲಿದ್ದೇವೆ ಎಂದೇನಿಲ್ಲ" ಎಂದಿದ್ದಾರೆ. ಮೆಗಾಸ್ಟಾರ್ ರಜನಿಕಾಂತ್ ಅವರ ಲಿಂಗಾ ಚಲನಚಿರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.