ಸಲ್ಮಾನ್ ಖಾನ್ 'ಸುಲ್ತಾನ್'ಗೆ ಕಾಯುತ್ತಿರುವ ಅಮೀರ್ ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್' ಬಿಡುಗಡೆಗಾಗಿ ಉತ್ಸುಕನಾಗಿ ಕಾಯುತ್ತಿದ್ದೇನೆ ಎಂದು ಬಾಲಿವುಡ್ ನ ಸಹನಟ ಅಮೀರ್ ಖಾನ್ ಇತ್ತೀಚೆಗೆ ಹೇಳಿದ್ದಾರೆ ಕರಾಚಿ: ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್' ಬಿಡುಗಡೆಗಾಗಿ ಉತ್ಸುಕನಾಗಿ ಕಾಯುತ್ತಿದ್ದೇನೆ ಎಂದು ಬಾಲಿವುಡ್ ನ ಸಹನಟ ಅಮೀರ್ ಖಾನ್ ಇತ್ತೀಚೆಗೆ ಹೇಳಿದ್ದಾರೆ. ಸೋನಮ್ ಕಪೂರ್ ಅವರ 'ನಿರ್ಜಾ' ಸಿನೆಮಾದ ಪ್ರದರ್ಶನದ ವೇಳೆ ಮಾತನಾಡಿದ ೫೦ ವರ್ಷದ ನಟ "ಸಲ್ಮಾನ್ ಸಿನೆಮಾಗಳು ಯಾವತ್ತು ಚೆನ್ನಾಗಿರುತ್ತವೆ. ಆದುದರಿಂದ ಅವರ 'ಸುಲ್ತಾನ್' ಸಿನೆಮಾ ಬಗೆಗೆ ಸಾಕಷ್ಟು ನಿರೀಕ್ಷೆಗಳಿವೆ. ಅವರ ಸಿನೆಮಾಗಳಿಗೆ ಜನ ಹೇಗೆ ತುದಿಗಾಲಿನಲ್ಲಿ ಕಾಯುವರೋ, ನಾನೂ ಕೂಡ ಹಾಗೆಯೇ ಕಾಯುತ್ತಿದ್ದೇನೆ. ಅದು ಒಳ್ಳೆಯ ಸಿನೆಮಾ ಆಗಿರುತ್ತದೆ" ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಹರ್ಯಾಣ ಮೂಲದ ಕುಸ್ತಿ ಪಟುವಿನ ಪಾತ್ರವನ್ನು ಸಿನೆಮಾದಲ್ಲಿ ಸಲ್ಮಾನ್ ನಿಭಾಯಿಸುತ್ತಿದ್ದಾರೆ. ಅನುಷ್ಕಾ ಶರ್ಮ ಸಿನೆಮಾದ ನಾಯಕ ನಟಿ. ಈದ್ ಗೆ 'ಸುಲ್ತಾನ್' ಬಿಡುಗಡೆಯಾಗಲಿದ್ದರೆ, ಕ್ರಿಸ್ಮಸ್ ಗೆ ಅಮೀರ್ ಅವರ 'ದಂಗಲ್' ಬಿಡುಗಡೆಯಾಗಲಿದೆ.