ಪೂನಂ ಯೋಗ ಯೋಗಕ್ಕೆ ಹೊಸ ಬ್ರಾಂಡ್ ಅಂಬಾಸಿಡರ್ ಸಿಕ್ಕಿದ್ದಾರೆ. ಅವರು ಬಿಕೆಎಸ್ ಅಯ್ಯಂಗಾರ್ ಅಲ್ಲ. ಅವರಿಗಿಂತಲೂ ಪವರ್ ಫುಲ್ಲು. ಆಕೆಯ ಹೆಸರು ಪೂನಂ ಪಾಂಡೆ... ಯೋಗಕ್ಕೆ ಹೊಸ ಬ್ರಾಂಡ್ ಅಂಬಾಸಿಡರ್ ಸಿಕ್ಕಿದ್ದಾರೆ. ಅವರು ಬಿಕೆಎಸ್ ಅಯ್ಯಂಗಾರ್ ಅಲ್ಲ. ಅವರಿಗಿಂತಲೂ ಪವರ್ ಫುಲ್ಲು. ಆಕೆಯ ಹೆಸರು ಪೂನಂ ಪಾಂಡೆ. ಕೆಲ ದಿನಗಳ ಹಿಂದೆ ತನ್ನ ಯೋಗಭಂಗಿಗಳನ್ನು ಪಬ್ಲಿಕ್ ಗೊಳಿಸಿ ಸಂಚಲನ ಸೃಷ್ಟಿಸಿದ್ದ ಪೂನಂ, ಈಗ ಮತ್ತೆ ತನ್ನ ತಿರುಗಣಿ ಬಾಡಿಯ ಕೆಲ ಯೋಗ ಭಂಗಿಗಳನ್ನು ವಿಡಿಯೋ ಮಾಡಿ ಯುಟ್ಯೂಬಿನಲ್ಲಿ ಹರಿಬಿಟ್ಟಿದ್ದಾಳೆ. ಇದೀಗಿನ್ನೂ ಟೀಸರ್ರು, ಪೂರ್ತಿ ವಿಡಿಯೋ ಸೆ.5ಕ್ಕೆ ಬಿಡುವುದಾಗಿ ಹೆದರಿಸಿದ್ದಾಳೆ. ಅಂತೂ ಸನಾತನ ಭಾರತೀಯ ಪರಂಪರೆಗೊಂದು ಸನೂತನ ಮಾಡೆಲ್ ಸಿಕ್ಕಿದ್ದಾಳೆ. ಈಕೆಯ ಭಂಗಿ ನೋಡಿದರೆ ಯೋಗಕ್ಕಿಂತ ಭೋಗವೇ ಹೆಚ್ಚು ನೆನಪಾಗುತ್ತದೆ ಅನ್ನಬೇಡಿ.