ಅಮೀರ್, ಶಾರುಖ್ ವಿರುದ್ಧ ಟ್ವೀಟ್ ಮಾಡಿದರೆ ಟ್ವಿಟರ್ ಬಿಟ್ಟು ಹೋಗ್ತೀನಿ: ಅಭಿಮಾನಿಗಳಿಗೆ ಸಲ್ಮಾನ್ ಎಚ್ಚರಿಕೆ ಬಾಲಿವುಡ್ ನ ಖಾನ್ ತ್ರಯರಲ್ಲಿ ಯಾರು ಉತ್ತಮರು ಎಂಬ ಬಗ್ಗೆ ಅಭಿಮಾನಿಗಳು ಪರಸ್ಪರ ವಾಗ್ದಾಳಿ ನಡೆಸುವ ಬಗ್ಗೆ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನ ಖಾನ್ ತ್ರಯರಲ್ಲಿ ಯಾರು ಉತ್ತಮರು ಎಂಬ ಬಗ್ಗೆ ಅಭಿಮಾನಿಗಳು ಪರಸ್ಪರ ವಾಗ್ದಾಳಿ ನಡೆಸುವ ಬಗ್ಗೆ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಫೇಕ್ ಐಡಿ ಬಳಸಿಕೊಂಡು ತಮ್ಮ ಅಭಿಮಾನಿಗಳು ಶಾರುಖ್ ಖಾನ್ ಅಮೀರ್ ಖಾನ್ ಅಥಾವ ಅನ್ಯ ನಟರ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದರೆ ತಾವು ಟ್ವಿಟರನ್ನೇ ಬಿಟ್ಟು ಹೋಗುವುದಾಗಿ ಸಲ್ಮಾನ್ ಖಾನ್ ಎಚ್ಚರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ವಿರುದ್ಧ ದ್ವೇಷಪೂರಿತ ಟ್ವೀಟ್ ಗಳನ್ನು ಮಾಡುತ್ತಿರುವುದನ್ನು ಗಮನಿಸಿರುವ ಸಲ್ಮಾನ್ ಖಾನ್,ಶಾರುಖ್ ಹಾಗೂ ಅಮೀರ್ ಖಾನ್ ರನ್ನು ದ್ವೇಷಿಸುವುದನ್ನು ಬಿಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. . , , . , , ,' . .