ಬಾಲಿವುಡ್ ನಟ ಸೋನು ಸೂದ್ ಗೆ ಸೇರಿದ ಆರು ಕಡೆ ಐಟಿ ದಾಳಿ ಬಾಲಿವುಡ್ ನಟ ಸೋನು ಸೂದ್ ಗೆ ಸೇರಿದ ಮುಂಬೈ ಮತ್ತು ಲಖನೌನ ಆರು ಕಡೆಗಳಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುಂಬೈ: ಬಾಲಿವುಡ್ ನಟ ಸೋನು ಸೂದ್ ಗೆ ಸೇರಿದ ಮುಂಬೈ ಮತ್ತು ಲಖನೌನ ಆರು ಕಡೆಗಳಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮಟನ್ ಶಾಪ್'ಗೆ ಸೋನು ಸೂದ್ ಹೆಸರು: ನಟ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?ನಟನ ಮನೆ ಮತ್ತು ಲಖನೌ ಕಂಪನಿಗಳಲ್ಲಿ ಐಟಿ ಅಧಿಕಾರಿಗಳು ತಪಾಪಣೆ ನಡೆಸಿದ್ದಾರೆ. ತೆರಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಸೋನು ಸೂದ್ ವಿರುದ್ಧ ಐಟಿ ದಾಳಿ ನಡೆದಿದೆ. ಆದರೆ ದಾಳಿ ಕುರಿತಂತೆ ಸೋನು ಸೂದ್ ಅಧಿಕೃತ ಹೇಳಿಕೆ ನೀಡಿಲ್ಲ.ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ವಲಸಿಗರು ತಮ್ಮ ರಾಜ್ಯಗಳನ್ನು ತಲುಪಲು ಸಹಾಯ ಮಾಡಿದ್ದಕ್ಕಾಗಿ ನಟ ರಾಷ್ಟ್ರೀಯ ಗಮನ ಸೆಳೆದರು.ಇದನ್ನೂ ಓದಿ: ಆಮ್ಲಜನಕ ಕೊರತೆ ಕುರಿತು ಬೆಂಗಳೂರಿನಿಂದ ಎಸ್ಒಎಸ್; ಕೆಲವೇ ಗಂಟೆಗಳಲ್ಲಿ ಸ್ಪಂದಿಸಿ 22 ರೋಗಿಗಳ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್!ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 48 ವರ್ಷದ ಸೂದ್ ಆಮ್ ಆದ್ಮಿ ಪಕ್ಷದ ಸರ್ಕಾರದ ದೇಶ್ ಕಾ ಮೆಂಟರ್ಸ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿತ್ತು.