ವರ್ಷದ ಗ್ಲೋಬಲ್ ಇಂಡಿಯನ್’ ಪ್ರಶಸ್ತಿ ಗೆದ್ದ ನಟಿ ಐಶ್ವರ್ಯ ರೈ ಬಚ್ಚನ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಪ್ರಸಕ್ತ ವರ್ಷದ ’ಗ್ಲೋಬಲ್ ಇಂಡಿಯನ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮುಂಬೈ: ನಟಿ ಐಶ್ವರ್ಯ ರೈ ಬಚ್ಚನ್ ಅವರು ಪ್ರಸಕ್ತ ವರ್ಷದ ’ಗ್ಲೋಬಲ್ ಇಂಡಿಯನ್’ ಪ್ರಶಸ್ತಿಯನ್ನು ಗೆದ್ದುಗೊಂಡಿದ್ದಾರೆ. ಮುಂಬೈಯಲ್ಲಿ ನಡೆದ ವರ್ಷದ ಅನಿವಾಸಿ ಭಾರತೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಶ್ವರ್ಯ ಅವರನ್ನು ‘ವರ್ಷದ ಗ್ಲೋಬಲ್ ಇಂಡಿಯನ್’ ಪ್ರಶಸ್ತಿ ನೀಡಿ ಸೋಮವಾರ ಸಂಜೆ ಗೌರವಿಸಲಾಯಿತು.ಈ ಪ್ರಶಸ್ತಿಯನ್ನು ಪುತ್ರಿ ಆರಾಧ್ಯಳಿಗೆ ಅರ್ಪಿಸಿದರು. ವಿಶ್ವ ಸುಂದರಿ ಸ್ಪರ್ಧೆಯ ಕಾಲದಿಂದಲೂ ಭಾರತೀಯ ಮಹಿಳೆ ವಿಶ್ವ ವೇದಿಕೆಯಲ್ಲಿ ಮಿಂಚಬೇಕೆಂಬ ಗುರಿಯನ್ನು ನಾನು ಇಟ್ಟುಕೊಂಡಿದ್ದೆ. ಭಾರತೀಯ ಮಹಿಳೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಒಳ್ಳೆಯ ಅವಕಾಶ ಎಂದು ನಾನು ನಂಬಿದ್ದೆ. ಅಂದಿನಿಂದ ಈಗ 2016ರವರೆಗೂ ಇದು ಮುಂದುವರೆಯುತ್ತಲೇ ಬಂದಿದೆ’ ಎಂದು ಐಶ್ವರ್ಯ ರೈ ಹೇಳಿದ್ದಾರೆ. ಇನ್ನು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೂ ಅನಿವಾಸಿ ಭಾರತೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.