ಕರಣ್ ಜೋಹರ್- ಶಾರೂಖ್ ಮತ್ತೆ ಜೊತೆಗೆ? ಬಾಲಿವುಡ್ ನಲ್ಲಿ ಕರಣ್ ಜೋಹರ್ ಮತ್ತು ಶಾರೂಕ್ ಖಾನ್ ಜೋಡಿ ಜನಪ್ರಿಯ... ಬಾಲಿವುಡ್ ನಲ್ಲಿ ಕರಣ್ ಜೋಹರ್ ಮತ್ತು ಶಾರೂಕ್ ಖಾನ್ ಜೋಡಿ ಜನಪ್ರಿಯ. ಇವರಿಬ್ಬರ ಸಿನಿಮಾ ಎಂದರೆ ಜನಕ್ಕೆ ಕುತೂಹಲ. ಇಬ್ಬರೂ ಜೊತೆಯಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಇವರಿಬ್ಬರ ಚಿತ್ರ 'ಮೈ ನೇಮ್ ಈಸ್ ಖಾನ್' ಬಂದು ಐದು ವರ್ಷಗಳೇ ಆದವು. ನಂತರ ಇಬ್ಬರೂ ಒಟ್ಟಾಗಿರಲಿಲ್ಲ, ಇಬ್ಬರ ಮಧ್ಯೆ ಜಗಳವಾಗಿ ದೂರಾಗಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ ನಟಿಸಲು ಸರಿಯಾದ ಸ್ರ್ಕಿಪ್ಟ್ ಸಿಕ್ಕಿಲ್ಲ, ನಾವು ಚೆನ್ನಾಗಿದ್ದೇವೆ ಅಂತ ಸ್ವತಹ ಶಾರೂಖೇ ಸ್ಪಷ್ಟನೆ ನೀಡಿದರು.ನಂತರ ಎಲ್ಲವೂ ಸರಿ ಹೋಯಿತು. ಇದೀಗ ಕಾಲ ಕೂಡಿ ಬಂದಿರುವ ಹಾಗಿದೆ. ಶಾರೂಕ್ ರಾಯೀಸ್ ಮತ್ತು ದಿಲ್ ವಾಲೆ ಚಿತ್ರಗಳ ನಂತರ ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಅಭಿಮಾನಿಗಳು ಖುಷಿಯಾಗಿದ್ದಾರೆ. ಇವರಿಬ್ಬರ ಜೊತೆ ಕಾಜೋಲ್ ಸೇರಿಕೊಂಡರೆ ಇನ್ನೂ ಚೆನ್ನಾರಿರುತ್ತದೆಯಲ್ಲವೇ ಅಂತ ಮಾತಾಡಿಕೊಳ್ತಿದ್ದಾರೇನೋ ಸಿನಿ ಪ್ರಿಯರು.