ತನ್ನ 'ಮದುವೆಯ ವಯಸ್ಸು' ಬಹಿರಂಗಪಡಿಸಿದ ಆಲಿಯಾ ನಟಿ ಆಲಿಯಾ ಭಟ್ ತನ್ನ ಬಾಲ್ಯಗೆಳತಿ ಅನುಷ್ಕಾ ರಂಜನ್ ಅವರ ಚೊಚ್ಚಲ ಚಲನಚಿತ್ರ 'ವೆಡ್ಡಿಂಗ್ ಪಲಾವ್' ಟ್ರೇಲರ್ ಬಿಡುಗಡೆ ಮಾಡಿ, ೩೨ ನೆಯ ವಯಸ್ಸು ಮದುವೆಗೆ ಮುಂಬೈ: ನಟಿ ಆಲಿಯಾ ಭಟ್ ತನ್ನ ಬಾಲ್ಯಗೆಳತಿ ಅನುಷ್ಕಾ ರಂಜನ್ ಅವರ ಚೊಚ್ಚಲ ಚಲನಚಿತ್ರ 'ವೆಡ್ಡಿಂಗ್ ಪಲಾವ್' ಟ್ರೇಲರ್ ಬಿಡುಗಡೆ ಮಾಡಿ, ೩೨ ನೆಯ ವಯಸ್ಸು ಮದುವೆಗೆ ಸಶಸ್ತ ಸಮಯ ಎಂದು ತಿಳಿಸಿದ್ದಾರೆ. "ನಾನೀಗ ಕೇವಲ ೨೨ ಮತ್ತು ೩೨ಕ್ಕೆ ವೆಡ್ಡಿಂಗ್ ಪಲಾವ್ ರುಚಿ ನೋಡಲು ಸರಿಯಾದ ವಯಸ್ಸು. ನಾನು ಮದುವೆಯ ಲಡ್ಡು ಇನ್ನು ತಿಂದಿಲ್ಲ ಆದುದರಿಂದ ಅದರ ಬಗ್ಗೆ ವಿಷಾದವೇನಿಲ್ಲ" ಎಂದು ಟ್ರೇಲರ್ ಅನಾವರಣದ ವೇಳೆ ಹೇಳಿದ್ದಾರೆ. ತಾನು ವರಿಸುವ ಮದುಮಗನಲ್ಲಿ ನಿರೀಕ್ಷಿಸುವ ಗುಣಗಳ ಬಗ್ಗೆ ವಿವರಿಸಿದ ಅವರು, ಅವನಿಗೆ ಒಳ್ಳೆಯ ಹಾಸ್ಯ ಪ್ರವೃತ್ತಿ ಇರಬೇಕು ಎಂದಿದ್ದಾರೆ. "ಅವನು ನನ್ನನು ನಗಿಸಬೇಕು ಮತ್ತು ಅವನು ಸುರುಧ್ರೂಪಿ, ಸುರುಧ್ರೂಪಿ, ಸುರುಧ್ರೂಪಿ ಆಗಿರಬೇಕು" ಎಂದು ಹೇಳಿದ್ದಾರೆ. "ನನ್ನನ್ನು ಹೇಗೆ ಪ್ರಭಾವಿಸಬೇಕು ಎಂದು ನಾನು ಹೇಳುವುದಿಲ್ಲ, ನನ್ನನ್ನು ಪ್ರೀತಿಸುವವನಿಗೆ ನನ್ನನ್ನು ಪ್ರಭಾವಿಸುವುದು ಹೇಗೆ ಎಂದು ತಿಳಿದಿರಬೇಕು" ಎಂದು ಅವರು ತಿಳಿಸಿದ್ದಾರೆ. ಕರಣ್ ಮಲಹೋತ್ರ ಅವರ 'ಬ್ರದರ್ಸ್' ಸಿನೆಮಾ ನೋಡಿಯಾ ಮೇಲೆ ಗದ್ಗಳಿತಳಾದದ್ದು ಏಕೆ ಎಂದದ್ದಕ್ಕೆ "ನಾನು ಅಳಲಿಲ್ಲ ಆದರೆ ನಾನು ಸೂಕ್ಷ್ಮ ಹುಡುಗಿ. ಹೌದು ಕೆಲವೊಮ್ಮೆ ಭಾವನಾತ್ಮಕವಾಗಿ ವರ್ತಿಸುತ್ತೇನೆ" ಎಂದಿದ್ದಾರೆ.