ಇಂದಿನ ಯುವಜನತೆಗೆ ಬಾಲಿವುಡ್ ಶೈಲಿಯ ಡ್ಯಾನ್ಸ್ ಇಷ್ಟ: ಹೇಮ ಮಾಲಿನಿ ಇಂದಿನ ಯುವಜನತೆ ಬಾಲಿವುಡ್ ಶೈಲಿಯ ನೃತ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುತ್ತಾರೆ ಬಾಲಿವುಡ್ ನ ಹಿರಿಯ ನಟಿ, ರಾಜಕಾರಣಿ... ಇಂದಿನ ಯುವಜನತೆ ಬಾಲಿವುಡ್ ಶೈಲಿಯ ನೃತ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುತ್ತಾರೆ ಬಾಲಿವುಡ್ ನ ಹಿರಿಯ ನಟಿ, ರಾಜಕಾರಣಿ ಮತ್ತು ಸ್ವತಹ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಹೇಮ ಮಾಲಿನಿ ಅವರು. ಸಮಯ ಬದಲಾಗಿದೆ. ಇಂದಿನ ವೇಗದ ಸ್ಪರ್ಧಾತ್ಮಕ ಯುಗದಲ್ಲಿ ಕಲೆ, ಸಂಸ್ಕೃತಿ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.ಅವರ ತಾಯಿ ಜಯಾ ಚಕ್ರವರ್ತಿ ಅವರ ಸ್ಮರಣಾರ್ಥ ನಡೆದ ನೃತ್ಯ ಕಾರ್ಯಕ್ರಮ'ಜಯ ಸ್ಮೃತಿ'ಯಲ್ಲಿ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದಿನ ಯುವ ಜನಾಂಗ ಕೂಡ ಒಂದೇ ಥರ ಯೋಚನೆ ಮಾಡುತ್ತಾರೆ. ಜಗತ್ತು ಬದಲಾಗುತ್ತಿದ್ದಂತೆ ಅದರ ಜೊತೆ ತಾವು ಕೂಡ ಹೆಜ್ಜೆ ಹಾಕಲು ಬಯಸುತ್ತಾರೆ. ಮಾಡಿದ ಕೆಲಸಕ್ಕೆ ತಕ್ಷಣವೇ ಫಲ ದೊರಕಬೇಕೆಂದು ಬಯಸುತ್ತಾರೆ. ಇಂದು ಬಾಲಿವುಡ್ ಡ್ಯಾನ್ಸ್ ಮತ್ತು ಸಂಗೀತದ ಮೇಲೆ ಪಾಶ್ಚಾತ್ಯ ಸಂಗೀತ ಪ್ರಭಾವ ಬೀರುತ್ತಿದೆ ಎಂದರು. ಇಂದು ಕೆಲವರಿಗೆ ಮಾತ್ರ ಶಾಸ್ತ್ರೀಯ ನೃತ್ಯ ಕಲಿಯಲು ಆಸಕ್ತಿಯಿರುತ್ತದೆ. ಹೆಚ್ಚಿನವರು ಬಾಲಿವುಡ್ ಶೈಲಿಗೆ ಮೊರೆ ಹೋಗುತ್ತಿದ್ದಾರೆ. ಶಾಸ್ತ್ರೀಯ ನೃತ್ಯ ಕಲಿಯುವುದು, ಆಸಕ್ತಿ ಉಳಿಸಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ದೇಶೀಯ ಕಲೆಯಾದ, ನಮ್ಮ ದೇಶದ ಸಂಸ್ಕೃತಿಯಾದ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.