ಆಪರೇಶನ್ ಥಿಯೇಟರ್‌ನಿಂದ ರಣ್‌ವೀರ್‌ಸಿಂಗ್ ಸೆಲ್ಪೀ! ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಪರೇಶನ್‌ ಥಿಯೇಟರ್‌ನಿಂದ ಸೆಲ್ಫೀ ತೆಗೆದು ಅಲ್ಲಿನ ಪ್ರತಿಕ್ಷಣವನ್ನು ಟ್ವೀಟ್ ಮಾಡಿದ್ದಾರೆ... ಮುಂಬೈ: ಇದಕ್ಕೆ ಸೆಲ್ಫೀ ಗೀಳಿನ ಪರಾಕಾಷ್ಠೆ ಎಂದು ಹೇಳಬೇಕೋ ಎಂದು ಗೊತ್ತಾಗುತ್ತಿಲ್ಲ. ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಪರೇಶನ್‌ ಥಿಯೇಟರ್‌ನಿಂದ ಸೆಲ್ಫೀ ತೆಗೆದು ಅಲ್ಲಿನ ಪ್ರತಿಕ್ಷಣವನ್ನು ಟ್ವೀಟ್ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಬಾಜೀರಾವ್ ಮಸ್ತಾನಿ ಎಂಬ ಸಿನಿಮಾ ಶೂಟಿಂಗ್ ನಡುವೆ ರಣ್‌ವೀರ್ ಸಿಂಗ್ ಕೈಗೆ ಗಾಯವಾಗಿತ್ತು. ತೀವ್ರ ಗಾಯವಾಗಿದ್ದ ಕಾರಣ ಅವರನ್ನು ಮುಂಬೈ ಯ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಇಂದು ಬೆಳಗ್ಗೆ ಶಸ್ತ್ರಕ್ರಿಯೆ ನಡೆದಿತ್ತು. ಆಪರೇಷನ್ ಥಿಯೇಟರ್‌ನೊಳಗೆ ನಗುನಗುತ್ತಾ ಸೆಲ್ಫೀ ತೆಗೆದು, ಅಲ್ಲಿನ ಕ್ಷಣಗಳನ್ನು ರಣ್‌ವೀರ್ ಟ್ವೀಟ್ ಮಾಡಿದ್ದು ಹೀಗೆ.