ಕೊರೋನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಅಮಿತಾಬ್ ಬಚ್ಚನ್, ಟ್ವೀಟ್ ಮಾಡಿ ಅಭಿಮಾನಿಗಳಿಗೆ ಹೇಳಿದ್ದೇನು? ಮಹಾಮಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಮಹಾಮಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಅಮಿತಾಬ್ ಬಚ್ಚನ್ ಮುಂಬೈನ ನಾನಾವಟಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಸುಭಾಷಿತ ಒಂದನ್ನು ಟ್ವೀಟ್ ಮಾಡಿದ್ದಾರೆ. ಜೀವನದಲ್ಲಿ ಅತೃಪ್ತಿ, ಕೋಪ, ಅನುಮಾನ, ಸ್ವಾರ್ಥ, ಇಷ್ಟಪಡದಿರುವುದು, ಇತರಿಗಾಗಿ ಬದುಕುವ ಮನಸ್ಥಿತಿ ಈ ಆರು ಸ್ವಭಾವಗಳನ್ನು ಹೊಂದಿರುವವರು ಎಂದಿಗೂ ದುಃಖದೊಂದಿಗೆ ಕಾಲ ಕಳೆಯುತ್ತಾರೆ. ಅವರಿಗೆ ನೆಮ್ಮದಿ ಸಂತೋಷದ ಜೀವನ ದೊರಕುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಯಾರೇ ಆಗಲಿ ಇಂತಹ ಮನಸ್ಥಿತಿಯನ್ನು ಬದುಕಿನಲ್ಲಿ ಬೆಳೆಸಿಕೊಳ್ಳಬಾರದು. ಇದೇ ವೇಳೆ ಇಂತಹ ಸ್ವಭಾವದ ವ್ಯಕ್ತಿಗಳಿಂದ ದೂರ ಇರಬೇಕೆಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. 3595 () - , , , , .. .. 6 .. ..