ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಭಿಕ್ಷುಕಿಗೆ ಜಾಕ್ ಪಾಟ್: ರಾನು ಮೊಂಡಲ್ ಗೆ ಸಲ್ಮಾನ್ ಖಾನ್ ಭರ್ಜರಿ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್‌ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್‌ ಸಿನಿಮಾವೊಂದರ ಗಾಯಕಿಯಾಗಿದ್ದಾರೆ.. ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್‌ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್‌ ಸಿನಿಮಾವೊಂದರ ಗಾಯಕಿಯಾಗಿದ್ದಾರೆ, ಜೊತೆಗೆ ಅವರಿಗೆ ಹಲವು ಆಫರ್ ಗಳು ಹರಿದು ಬರುತ್ತಿವೆ.ನಟ ಸಲ್ಮಾನ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಅವರಿಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಸಲ್ಮಾನ್ ಖಾನ್ ಅವರು ರಾನು ಮೊಂಡಲ್ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ಅವರಿಗೆ 55 ಲಕ್ಷ ರೂ. ಬೆಲೆಯ ಮನೆ ಕೊಡಿಸಿದ್ದಾರೆ ಎಂದು ವರದಿಯಾಗಿದೆ.. ಈ ಮೊದಲು ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಸದ್ಯ ಸಲ್ಮಾನ್ ಕಷ್ಟದಲ್ಲಿ ಇರುವವರಿಗೆ ಯಾವಾಗಲೂ ಸಹಾಯ ಮಾಡುತ್ತಾರೆ. ಹಾಗೆಯೇ ಅವರು ರಾನು ಅವರಿಗೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಹಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾನು ಅವರು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದರು. ಈ ವಿಷಯವನ್ನು ಸ್ವತಃ ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ರಾನು ಅವರ ಮೊದಲ ಹಾಡಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ.