ಪಾಕ್ ವಿರುದ್ಧ ಭಾರತ ಜಯ: ಬಣ್ಣದೊಂದಿಗೆ ಪ್ರೀತಿ ಝಿಂಟಾ ವಿಜಯೋತ್ಸವ ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದಕ್ಕೆ ನಟಿ ಪ್ರೀತಿ ಝೀಂಟಾ ಪತಿ ಜೆನೆ ಗುಡ್‌ ಎನಾಫ್‌ ಪರಸ್ಪರ ಬಣ್ಣ... ನವದೆಹಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದಕ್ಕೆ ನಟಿ ಪ್ರೀತಿ ಝೀಂಟಾ ಪತಿ ಜೆನೆ ಗುಡ್‌ ಎನಾಫ್‌ ಪರಸ್ಪರ ಬಣ್ಣ ಎರೆಚಿಕೊಂಡು ಸಂಭ್ರಮಿಸಿದ್ದಾರೆ. ಪಾಕಿಸ್ತಾನ-ಟೀಂ ಇಂಡಿಯಾ ಪಂದ್ಯವನ್ನು ಪತಿಯೊಂದಿಗೆ ವೀಕ್ಷಿಸಿ ವಿಜಯೋತ್ಸವವನ್ನು ತನ್ನ ಆಪ್ತರೊಂದಿಗೆ ಅದ್ದೂರಿಯಾಗಿ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಸ್ನೇಹಿತರು ಹಾಗೂ ಪತಿಯೊಂದಿಗೆ ಹೋಳಿ ಆಚರಿಸುವ ಮೂಲಕ ತಮ್ಮ ಅಮೆರಿಕ ಪತಿಗೆ ಡಬಲ್ ಖುಷಿ ನೀಡಿದ್ದಾರೆ. 42ರ ಹರೆಯದ ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ಕಳೆದ ತಿಂಗಳು ಅಮೆರಿಕದ ಉದ್ಯಮಿ ಜೀನ್ ಗೂಡೆನಾಗ್ ಅವರನ್ನು ವಿವಾಹವಾಗಿದ್ದರು.