ಗಟ್ಟಿ ತಳವೂರಿದ ಬ್ರಿಟಿಷ್ ಬೆಡಗಿ! ಜಾಗತೀಕರಣ ಈ ಕಾಲಘಟ್ಟದಲ್ಲಿ ಯಾರು ಯಾವ ದೇಶಕ್ಕಾದರೂ ಹಾರಿ ತಮ್ಮ ಪ್ರತಿಭೆಯನ್ನು... ಜಾಗತೀಕರಣ ಈ ಕಾಲಘಟ್ಟದಲ್ಲಿ ಯಾರು ಯಾವ ದೇಶಕ್ಕಾದರೂ ಹಾರಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳ ಬಹುದು. ಸಿನಿಮಾ ಕ್ಷೇತ್ರಕ್ಕೂ ಈ ಮಾತು ಒಪ್ಪುತ್ತದೆ. ಭಾರತೀಯ ತಾರೆಗಳು ಹಾಲಿವುಡ್ ಕಡೆಗೆ ವಲಸೆ ಹೋಗುತ್ತಿದ್ದರೆ ವಿದೇಶಿ ತಾರೆಗಳು ಇಲ್ಲಿಗೆ ಆಮದಾಗುತ್ತಿದ್ದಾರೆ. ಸದ್ಯಕ್ಕೆ ಬಾಲಿವುಡ್‍ನಲ್ಲಿ ಚಲಾವಣೆಯಲ್ಲಿ ರುವ ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್ ನಂತಹ ತಾರೆಗಳ ಅಂದಚೆಂದಕ್ಕೆ ಇಲ್ಲಿ ರತ್ನಗಂಬಳಿ ಹಾಸಿ ಅವಕಾಶ ನೀಡ ಲಾಗುತ್ತಿದೆ. ಆದರೆ ಆಮದಾದ ಎಲ್ಲ ತಾರೆಗಳಿಗೆ ಈ ಅದೃಷ್ಟವಿಲ್ಲ. ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಸಹ ಈಗೀಗ ಆ ಪ್ರಯತ್ನದಲ್ಲಿದ್ದಾರೆ. ಬಹಳಷ್ಟು ಆಮದು ಬೆಡಗಿಯರು ಹಾಗೆ ಬಂದು ಹೀಗೆ ಸೊಂಟ ಬಳುಕಿಸಿ ಮಾಯವಾದವರೇ ಹೆಚ್ಚು. ಪಾಕಿಸ್ತಾನ ಮೂಲದ ಅಮೆರಿಕನ್ ನಟಿ ನರ್ಗೀಸ್ ಫಕ್ರಿ, ಮೆಕ್ಸಿಕನ್ ಚೆಲುವೆ ಬಾರ್ಬರಾ ಮೋರಿ, ಜೆಕೋಸ್ಲೋವಾಕಿಯಾ ಮೂಲದ ಯಾನಾ ಗುಪ್ತ ಇನ್ನೂ ಅನೇಕರು ಗಾಳಿಪಟದಂತೆ ಹಾರಾಡಿ ಮರೆಯಾದವರೇ ಎಲ್ಲ. ಆದರೆ ಭಾರತೀಯ ಸಂತತಿಗೆ ಸೇರಿದ ಬ್ರಿಟಿಷ್ ಬೆಡಗಿ ಕತ್ರಿನಾ ಆರಂಭದಲ್ಲಿ ಡಾನ್ಸ್, ರೊಮಾನ್ಸ್, ಆಕ್ಟಿಂಗ್‍ನಲ್ಲಿ ವಿಮರ್ಶೆಗೆ ಗುರಿಯಾದರೂ ಬಳಿಕ ಬಾಲಿವುಡ್‍ನಲ್ಲಿ ಗಟ್ಟಿ ತಳವೂರಿದ ತಾರೆ ಎನಿಸಿಕೊಂಡರು.