ಬಾಲಿವುಡ್ ನಲ್ಲಿ ಹಾಡಲಿದ್ದಾರೆ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಬಾಲಿವುಡ್‌ನ‌ಲ್ಲಿ ತಮ್ಮ ಸುಮಧುರ ಧ್ವನಿಯಿಂದ ಮೋಡಿ ಮಾಡಲಿದ್ದಾರೆ.... ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಬಾಲಿವುಡ್‌ನ‌ಲ್ಲಿ ತಮ್ಮ ಸುಮಧುರ ಧ್ವನಿಯಿಂದ ಮೋಡಿ ಮಾಡಲಿದ್ದಾರೆ. ಪ್ರಕಾಶ್‌ ಜಾ ಅವರ ಜೈ ಗಂಗಾಜಲ್‌ ಚಿತ್ರಕ್ಕೆ ಅಮೃತಾ ಫಡ್ನವೀಸ್‌ ಅವರು ಈಗಾಗಲೇ ಹಾಡುಗಳನ್ನು ರೆಕಾರ್ಡ್‌ ಮಾಡಿದ್ದಾರೆ. ಕುನಾಲ್‌ ಕೊಹ್ಲಿ ಅವರ ಚಿತ್ರಕ್ಕೆ ಅಮೃತಾ ಅವರು ಯಾವ ಹಾಡನ್ನು ಹಾಡಿದ್ದರೋ, ಅದನ್ನು ನಾನು ಕೇಳಿದೆ ಮತ್ತು ಅವರ ಧ್ವನಿ ನನಗೆ ತುಂಬಾ ಇಷ್ಟವಾಗಿದೆ. ಅವರ ಧ್ವನಿ ತುಂಬಾ ಸುಂದರ, ಕೋಮಲ ಮತ್ತು ಗಂಭೀರವಾಗಿದೆ ಎಂದು ಚಿತ್ರ ನಿರ್ಮಾಪಕ ಪ್ರಕಾಶ್‌ ಝಾ ಅವರು ಹೇಳಿದಿದ್ದಾರೆ. ನನಗೆ ನನ್ನ ಚಿತ್ರದ ಸಬ್‌ ಧನ್‌ ಮಾಟಿ ಎಂಬ ಹಾಡಿಗೆ ಯಾವ ಧ್ವನಿ ಬೇಕಾಗಿತ್ತೋ, ಅದೇ ರೀತಿ ಧ್ವನಿ ಅಮೃತಾ ಅವರಲ್ಲಿದೆ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಾನು ನನ್ನ ಕಂಪೋಸರ್‌ ಸಲೀಂ ಸುಲೇಮಾನ್‌ ಅವರಿಗೆ ಚಿತ್ರದ ಹಾಡಿಗೆ ಅಮೃತಾ ಅವರೊಂದಿಗೆ ಸಿದ್ಧತೆ ನಡೆಸಲು ಹೇಳಿದ್ದೆ. ಅವರಿಗೂ ಅಮೃತಾ ಅವರ ಧ್ವನಿ ಹಿಡಿಸಿದೆ. ಕಳೆದ ತಿಂಗಳು ನಾವು ಎರಡು ಸೆಶನ್‌ನಲ್ಲಿ ಈ ಹಾಡನ್ನು ರೆಕಾರ್ಡ್‌ ಮಾಡಿದ್ದೇವೆ ಎಂದು ಚಲನಚಿತ್ರ ನಿರ್ಮಾಪಕ, ಪ್ರಕಾಶ್‌ ಝಾ ಹೇಳಿದ್ದಾರೆ.