ನಟ ಕಪಿಲ್ ಶರ್ಮಾ ವಿರುದ್ಧ ಎಫ್ ಐ ಆರ್ ಕಾಮಿಡಿ ನಟ ಕಪಿಲ್ ಶರ್ಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಂಬಯಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ಸ್ ನಾಶ ಪಡಿಸಿದ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ.. ಮುಂಬಯಿ: ಕಾಮಿಡಿ ನಟ ಕಪಿಲ್ ಶರ್ಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಂಬಯಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ಸ್ ನಾಶ ಪಡಿಸಿದ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ, ಪರಿಸರ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕಪಿಲ್ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ. ತಮ್ಮ ಬಂಗ್ಲೆಯ ಹಿಂದಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ ಬಳಿ ಕಸ ಸುರಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಈ ಹಿಂದೆ ಸೆಪ್ಟಂಬರ್ 5 ರಂದು ಮುಂಬಯಿ ಮಹಾನಗರ ಪಾಲಿಕೆ ತನ್ನಿಂದ 5 ಲಕ್ಷ ರು ಲಂಚ ಕೇಳಿದೆ ಎಂದು ಹೇಳಿ ಕಪಿಲ್ ಶರ್ಮಾ ಸುದ್ದಿಯಾಗಿದ್ದರು.