ಹಾಲಿವುಡ್ ಧಾರಾವಾಹಿಯಲ್ಲಿ ಪ್ರಿಯಾಂಕ; ಬಾಲಿವುಡ್ ಸಂತಸ ಅಮೇರಿಕಾದ ಟಿವಿ ಸೀರಿಯಲ್ 'ಕ್ವಾಂಟಿಕೋ' ದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ನಟಿಸುತ್ತಿರುವ ವರದಿಗೆ ಬಾಲಿವುಡ್ ಸಂತಸ ವ್ಯಕ್ತಪಡಿಸಿದೆ. ಮುಂಬೈ: ಅಮೇರಿಕಾದ ಟಿವಿ ಸೀರಿಯಲ್ 'ಕ್ವಾಂಟಿಕೋ' ದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ನಟಿಸುತ್ತಿರುವ ವರದಿಗೆ ಬಾಲಿವುಡ್ ಸಂತಸ ವ್ಯಕ್ತಪಡಿಸಿದೆ. ಬಾಲಿವುಡ್ ನಟರಾದ ವರುಣ್ ಧವನ್, ಅರ್ಜುನ್ ಕಪೂರ್ ಮತ್ತು ಕೀರ್ತಿ ಸನೋನ್ ಪ್ರಿಯಾಂಕ ಚೋಪ್ರಾ ಹಾಲಿವುಡ್ ಗೆ ಜಿಗಿದಿರುವುದಕ್ಕೆ ಹೆಮ್ಮೆ ಎಂದಿದ್ದಾರೆ. 'ಮೇರಿ ಕೋಮ್' ನಟಿ ಪ್ರಿಯಾಂಕ ಚೋಪ್ರಾ ಬುಧವಾರ ಟ್ವಿಟ್ಟರ್ ನಲ್ಲಿ ತಾವು ನಟಿಸಲಿರುವ ಈ ಧಾರಾವಾಹಿಯ ಟ್ರೇಲರ್ ಹಂಚಿಕೊಂಡಿದ್ದರು. # ! ? !!! ://./aI4gj4bFFF