ಮೂರು ವರ್ಷಗಳ ನಂತರ ತಾಯ್ನಾಡಿಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 3 ವರ್ಷಗಳ ನಂತರ ಭಾರತಕ್ಕೆ ಬಂದಿಳಿದಿದ್ದಾರೆ. ಹೀಗಾಗಿ ಸಹಜ ವಾಗಿಯೇ ಕಾತರರಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ನಂತರ, ಜೀವನದಲ್ಲಿ ಮಗುವಿನ ಆಗಮನ, ಆರೈಕೆ ಹೀಗೆ ಬ್ಯುಸಿಯಾಗಿದ್ದ ನಟಿ ಮೂರು ವರ್ಷಗಳ ನಂತರ ಬಂದಿಳಿದಿದ್ದು, ಇದಕ್ಕೂ ಮುನ್ನ ಭಾರತ ಪ್ರವಾಸವನ್ನು ಎದುರು ನೋಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 3 ವರ್ಷಗಳ ನಂತರ ಭಾರತಕ್ಕೆ ಬಂದಿಳಿದಿದ್ದಾರೆ. ಹೀಗಾಗಿ ಸಹಜ ವಾಗಿಯೇ ಕಾತರರಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ನಂತರ, ಜೀವನದಲ್ಲಿ ಮಗುವಿನ ಆಗಮನ, ಆರೈಕೆ ಹೀಗೆ ಬ್ಯುಸಿಯಾಗಿದ್ದ ನಟಿ ಮೂರು ವರ್ಷಗಳ ನಂತರ ಬಂದಿಳಿದಿದ್ದು, ಇದಕ್ಕೂ ಮುನ್ನ ಭಾರತ ಪ್ರವಾಸವನ್ನು ಎದುರು ನೋಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟ ನಟ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ. ಸುಮಾರು 3 ವರ್ಷಗಳ ನಂತರ ಎಂದು ಪ್ರಿಯಾಂಕಾ ತನ್ನ ಬೋರ್ಡಿಂಗ್ ಪಾಸ್‌ನ ಚಿತ್ರದೊಂದಿಗೆ ನಲ್ಲಿ ಬರೆದುಕೊಂಡಿದ್ದಾರೆ. ಈ ಪ್ರವಾಸವು ಅವರ ಮಗಳು ಮಾಲ್ಟಿ ಮೇರಿ ಜೋನಾಸ್ ಅವರಿಗೆ ಭಾರತದ ಮೊದಲ ಭೇಟಿಯಾಗಿದೆ. ಪ್ರಿಯಾಂಕಾ ಮತ್ತು ಅವರ ಪತಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರು ಬಾಡಿಗೆ ತಾಯ್ತನದ ಮೂಲಕ ಈ ವರ್ಷದ ಆರಂಭದಲ್ಲಿ ಪೋಷಕರಾಗಿದ್ದರು.ನಟನೆಯ ವಿಚಾರಕ್ಕೆ ಬಂದಾಗ ಸ್ಯಾಮ್ ಹ್ಯೂಘನ್ ಜೊತೆಗೆ "ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ" ಮತ್ತು ಅಮೆಜಾನ್ ಸ್ಟುಡಿಯೋ ಸ್ಪೈ ಸರಣಿ "ಸಿಟಾಡೆಲ್" ನಲ್ಲಿ ರಿಚರ್ಡ್ ಮ್ಯಾಡೆನ್ ("ಗೇಮ್ ಆಫ್ ಥ್ರೋನ್ಸ್") ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅವರ ಮುಂದಿನ ಹಿಂದಿ ಚಿತ್ರ "ಜೀ ಲೇ ಜರಾ", ಇದನ್ನು ನಿರ್ಮಾಪಕ ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆಗೆ ಪ್ರಿಯಾಂಕಾ ನಟಿಸಲಿದ್ದಾರೆ.