ಪುಣೆ ಥಿಯೇಟರ್ ಗಳಲ್ಲಿ ಬಾಜೀರಾವ್ ಮಸ್ತಾನಿ ಪ್ರದರ್ಶನ ರದ್ದು ಪ್ರತಿಭಟನೆ ಹಿನ್ನೆಲೆಯಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ "ಬಾಜಿರಾವ್‌ ಮಸ್ತಾನಿ' ಹಿಂದಿ ಸಿನಿಮಾ ಪ್ರದರ್ಶನವನ್ನು ಪುಣೆಯ ಥಿಯೇಟರ್ ಗಳಲ್ಲಿ ರದ್ದುಗೊಳಿಸಲಾಗಿದೆ.... ಮುಂಬಯಿ: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ "ಬಾಜಿರಾವ್‌ ಮಸ್ತಾನಿ' ಹಿಂದಿ ಸಿನಿಮಾ ಪ್ರದರ್ಶನವನ್ನು ಪುಣೆಯ ಥಿಯೇಟರ್ ಗಳಲ್ಲಿ ರದ್ದುಗೊಳಿಸಲಾಗಿದೆ. ಬಾಜಿರಾವ್‌ ಮಸ್ತಾನಿ ಸಿನಿಮಾದಲ್ಲಿ ಮರಾಠಾ ಪೇಶ್ವೆ ಬಾಜೀರಾವ್ ಮತ್ತು ಆತನ ಎರಡನೇ ಪತ್ನಿ ಮಸ್ತಾನಿ ಕುರಿತ ಕಥೆಯಿದ್ದು ಇತಿಹಾಸವನ್ನು ತಿರುಚಲಾಗಿದೆ ಎಂದು ಬಿಜೆಪಿ ಯುವ ಘಟಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ರಣವೀರ ಸಿಂಗ್‌, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಭಿನಯಿಸಿರುವ ಈ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಗೊಂಡಿದೆ.