ಡಂಕಿ ಟ್ರೈಲರ್ ಬಿಡುಗಡೆ: ಜವಾನ್ ಬಳಿಕ ಶಾರುಖ್ ಖಾನ್ ಮತ್ತೊಂದು ಮಿಷನ್! ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಮತ್ತು ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಡಂಕಿ ಚಿತ್ರದ ಟ್ರೈಲರ್ ನ ನಾಲ್ಕನೇ ಭಾಗ ಬಿಡುಗಡೆಯಾಗಿದೆ. ಮುಂಬೈ: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಮತ್ತು ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಡಂಕಿ ಚಿತ್ರದ ಟ್ರೈಲರ್ ನ ನಾಲ್ಕನೇ ಭಾಗ ಬಿಡುಗಡೆಯಾಗಿದೆ.ಲಂಡನ್ ಗೆ ಹೋಗಬೇಕು ಎನ್ನುವ ಯುವಕರ ಆಸೆಗೆ ಇಂಗ್ಲಿಷ್ ಭಾಷೆ ಹೇಗೆ ತಡೆಯಾಗುತ್ತದೆ... ಅದನ್ನು ಮೆಟ್ಟಿ ನಿಂತು ಅವರು ಹೇಗೆ ಲಂಡನ್ ಗೆ ತೆರಳುತ್ತಾರೆ. ಮಾರ್ಗ ಮಧ್ಯೆ ಯಾವೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ.. ಲಂಡನ್ ಗೆ ಹೋದ ಬಳಿಕ ಏನು ನಡೆಯುತ್ತದೆ ಎಂಬ ಕುತೂಹಲಕಾರಿ ಪ್ರಶ್ನೆಗಳನ್ನು ಈ ಟ್ರೈಲರ್ ಹುಟ್ಟು ಹಾಕುತ್ತದೆ.ಇದನ್ನೂ ಓದಿ: ಹಿಂದಿ ಜನಪ್ರಿಯ 'ಸಿಐಡಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ದಿನೇಶ್ ಫಡ್ನಿಸ್ ವಿಧಿವಶ!ಭಾಷೆಯ ಅಡೆತಡೆಯ ಹೊರತಾಗಿಯೂ ಅವರು ತಮ್ಮ ಪರಿಸ್ಥಿತಿಯನ್ನು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಹೋಲಿಸಿ ತಮ್ಮ ಆಶಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಬೊಮ್ಮನ್ ಇರಾನಿ ಅವರು ಇಂಗ್ಲಿಷ್ ಶಿಕ್ಷಕರಾಗಿ ಕಾಣಿಸಿಕೊಂಡಿದ್ದು, ಹಾಲಿ ಟ್ರೈಲರ್‌ನ ಗಮನಾರ್ಹ ಭಾಗವು ಗಡಿಯುದ್ದಕ್ಕೂ ಈ ಗುಂಪಿನ ಅಪಾಯಕಾರಿ ಪ್ರಯಾಣವನ್ನು ತೋರಿಸುತ್ತದೆ. ತನ್ನ ಸ್ನೇಹಿತರನ್ನು ರಕ್ಷಿಸಲು ಶಾರುಖ್ ಬಂದೂಕನ್ನು ಹಿಡಿದಿರುವಂತಹ ತೀವ್ರವಾದ ಕ್ಷಣಗಳನ್ನು ಟ್ರೈಲರ್ ಒಳಗೊಂಡಿದೆ.