' ಮಣಿ ಕರ್ಣಿಕ' ಚಿತ್ರದಲ್ಲಿನ ಕಂಗನಾ ಪಾತ್ರದ ಮೊದಲ ಪೊಸ್ಟರ್ ಬಿಡುಗಡೆ ಬಾಲಿವುಡ್ ಕ್ವೀನ್ ಕಂಗನಾ ರಣವತ್ ಅಭಿಯನದ ಮುಂದಿನ ಚಿತ್ರ ಮಣಿಕರ್ಣಿಕದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಈಕೆ ಜಾನ್ಸಿ ರಾಣಿಯಾಗಿ ಕಾಣಿಸಿಕೊಂಡಿದ್ದು, ಅಂತಿಮವಾಗಿ ಬಯಲಾಗಿದೆ. ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿಯನದ ಮುಂದಿನ ಚಿತ್ರ ಮಣಿಕರ್ಣಿಕದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಈಕೆ ಜಾನ್ಸಿ ರಾಣಿಯಾಗಿ ಕಾಣಿಸಿಕೊಂಡಿದ್ದು, ಅಂತಿಮವಾಗಿ ಬಯಲಾಗಿದೆ. ಜಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕ್ವೀನ್ ಸ್ಟಾರ್ ಕಂಗನಾ ಅಭಿನಯಿಸುತ್ತಿದ್ದು, ಮೊದಲ ಪೋಸ್ಟರ್ ನಲ್ಲಿ ಆಕ್ರಮಣಕಾರಿ ಹಾಗೂ ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಕೃಷ್ಣ ಜಗರ್ ಲಾಮುಡಿ ಚಿತ್ರದ ಮೊದಲ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮಣಿ ಕರ್ಣಿಕ ಚಿತ್ರದಲ್ಲಿ ತಾತ್ಯಾಟೋಪಿ ಪಾತ್ರದಲ್ಲಿ ಅತುಲ್ ಕುಲಕರ್ಣೀ, ಸದಾಶಿವ ಪಾತ್ರದಲ್ಲಿ ಸೊನು ಸೊದ್, ಮತ್ತು ಜಾಲ್ಕರ್ ಬಾಯಿ ಪಾತ್ರದಲ್ಲಿ ಅಂಕಿತಾ ಲೊಖಾಂಡೆ ಅಭಿನಯಿಸುತ್ತಿದ್ದಾರೆ. ಮಣಿಕರ್ಣಿಕ ಚಿತ್ರ ಮುಂದಿನ ವರ್ಷದ ಜನವರಿ 25 ರಂದು ತೆರೆ ಮೇಲೆ ತರುವ ನಿಟ್ಟಿನಲ್ಲಿ ಚಿತ್ರತಂಡ ಬಿರುಸಿನ ಚಿತ್ರೀಕರಣದಲ್ಲಿ ತೊಡಗಿದೆ.