ನಾನಾ ಪಾಟೇಕರ್- ತನುಶ್ರೀ ವಿವಾದ : ತಿರುಚಿದ ವಿಡಿಯೋ , ಅಕ್ಷಯ್ ಕುಮಾರ್ ದೂರು ದಾಖಲು ! ಬಾಲಿವುಡ್ ನಟ ನಾನಾ ಪಾಟೇಕರ್ ಹಾಗೂ ನಟಿ ತನುಶ್ರೀ ನಡುವಿನ ವಿವಾದ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿ ನಟ ಅಕ್ಷಯ್ ಕುಮಾರ್ ಯುೂ ಟ್ಯೂಬ್ ಚಾನೆಲ್ ಹಾಗೂ ವ್ಯಕ್ತಿಯೋರ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಹಾಗೂ ನಟಿ ತನುಶ್ರೀ ನಡುವಿನ ವಿವಾದ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ ನಟ ಅಕ್ಷಯ್ ಕುಮಾರ್ ಯುೂ ಟ್ಯೂಬ್ ಚಾನೆಲ್ ಹಾಗೂ ವ್ಯಕ್ತಿಯೋರ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚಿಗೆ ಜೈಸಲ್ಮಾರ್ ನಲ್ಲಿ ಹೌಸ್ ಪುಲ್ -4 ಚಿತ್ರದ ಚಿತ್ರೀಕರಣ ವೇಳೆಯಲ್ಲಿ ನಾನಾ ಪಾಟೇಕರ್ ಜೊತೆಯಲ್ಲಿ ಪಾಲ್ಗೊಂಡಿದ್ದ ಅಕ್ಷಯ್ ಕುಮಾರ್, ಜನಪ್ರಿಯ ಬಾಲಿವುಡ್ ನಟಿಗೆ ಬಗ್ಗೆ ಕೆಲವರು ಕೇಳಿದ್ದರು. ಆದರೆ, ನಂತರ ಆ ಭಾಗವನ್ನು ಎಡಿಟ್ ಮಾಡಿ ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ಅಕ್ಷಯ್ ಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಶ್ನೆ ಕೇಳಿದ ನೈಜ ನಟಿ ಜಾಗದಲ್ಲಿ ನಾನಾ ಪಾಟೇಕರ್ ವಿರುದ್ದ ಆರೋಪ ಮಾಡುತ್ತಿರುವ ತನುಶ್ರೀ ದತ್ತಾ ಅವರ ವಿಡಿಯೋವನ್ನು ಆ ವ್ಯಕ್ತಿ ಅಪ್ ಲೋಡ್ ಮಾಡಿದ್ದಾರೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಅಕ್ಷಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ ಕೂಡಲೇ ಯೂ ಟೂಬ್ ಚಾನೆಲ್ ನಿಂದ ಆ ವಿಡಿಯೋ ನಾಪತ್ತೆಯಾಗಿದೆ. ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ. 2008ರಲ್ಲಿ ಹಾರ್ನ್ ಓಕೆ ಫ್ಲೀಸಸ್ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ನಾನಾ ಪಾಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಆರೋಪಿಸಿದ ನಂತರ ಬಾಲಿವುಡ್ ನಲ್ಲಿ ಪರ ಹಾಗೂ ವಿರುದ್ಧ ಹೇಳಿಕೆಗಳು ಹೊರಹೊಮ್ಮುತ್ತಿವೆ.