ನಾನಾ ಪಟೇಕರ್ ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ. ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ. 2008ರಲ್ಲಿ 'ಹಾರ್ನ್ ಒಕೆ ಪ್ಲೀಸಸ್ ' ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಬಾಲಿವುಡ್ ಹಿರಿಯ ನಟ ನಾನಾ ಪಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕ ಕಿರುಕುಳು ನೀಡಿದ್ದಾರೆ ಎಂದು ಆರೋಪಿದ್ದರು. ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮೇಲೂ ತನುಶ್ರೀ ದತ್ ಆರೋಪ ಮಾಡಿದ್ದರು. ಆದಾಗ್ಯೂ, ಈ ಎಲ್ಲಾ ನಾಟಕಗಳ ಮಧ್ಯೆ, ನಾನಾ ಪಟೇಕರ್ ಅವರ ಮುಂದಿನ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರುವ ಪರ್ಹನ್ ಖಾನ್ ಚಿತ್ರೀಕರಣದ ಚಿತ್ರವೊಂದನ್ನು ತಮ್ಮ ಇನ್ ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಕೀರ್ತಿ ಸನಾನ್, ಪೂಜಾ ಹೆಗ್ಡೆ, ನಾನಾ ಪಟೇಕರ್ ಈ ಪೋಟೋದಲ್ಲಿದ್ದಾರೆ. ಅಕ್ಷಯ್ ಕುಮಾರ್, ಬಾಬಿ ಡಿಯೊಲ್, ರಿತೇಶ್ ದೇಶ್ ಮುಖ್ ಹಾಗೂ ಕೀರ್ತಿ ಕರಬಂಧ ಮತ್ತಿತರ ತಾರಾಗಣವಿರುವ ಈ ಚಿತ್ರ ಹೌಸ್ ಪುಲ್ ಚಿತ್ರ ಸರಣಿಯ ನಾಲ್ಕನೇ ಸಿನಿಮಾವಾಗಿದೆ. ಮುಂದಿನ ವರ್ಷದ ಅಕ್ಟೋಬರ್ ವೇಳೆಗೆ ದೀಪಾವಳಿ ಕೂಡುಗೆಯಾಗಿ ಚಿತ್ರ ಬಿಡುಗಡೆ ಆಗಲಿದೆ.