ಮೊಮ್ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಬಚ್ಚನ್: ಆರಾಧ್ಯಳ ಸ್ವಗತಕ್ಕೆ ಬಿಗ್ ಬಿ ಫುಲ್ ಖುಷ್ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊಮ್ಮಗಳು ಆರಾಧ್ಯಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳ ನೃತ್ಯ, ಮಾತು ನೋಡಿ ಸಂತೋಷಪಟ್ಟಿದ್ದಾರೆ.ಆ ಮುಂಬೈ: ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳ ಆಟ-ಪಾಠ ನೋಡುವುದೆಂದರೆ ಅಜ್ಜ-ಅಜ್ಜಿಯಂದಿರಿಗೆ ಖುಷಿಯ ಸಂಗತಿ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊಮ್ಮಗಳು ಆರಾಧ್ಯಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳ ನೃತ್ಯ, ಮಾತು ನೋಡಿ ಸಂತೋಷಪಟ್ಟಿದ್ದಾರೆ.ಆರಾಧ್ಯ ಬಚ್ಚನ್ ಶಾಲಾ ವಾರ್ಷಿಕೋತ್ಸವದಲ್ಲಿ ಹೇಳಿದ್ದ ಮಹಿಳಾ ಸಶಕ್ತೀಕರಣದ ಸ್ವಗತ ಮಾತಿನ ತುಣುಕನ್ನು ಯಾರೋ ಅಭಿಮಾನಿಗಳು ವಿಡಿಯೊ ಶೇರ್ ಮಾಡಿ ಕುಟುಂಬದ ಹೆಮ್ಮೆ ಎಂದು ಬರೆದಿದ್ದರು. ಇದನ್ನು ರಿಟ್ವೀಟ್ ಮಾಡಿರುವ ಬಿಗ್ ಬಿ, ಕುಟುಂಬದ ಹೆಮ್ಮೆ, ಹೆಣ್ಣಿನ ಹೆಮ್ಮೆ, ಎಲ್ಲಾ ಮಹಿಳೆಯರ ಹೆಮ್ಮೆ, ನಮ್ಮ ಪ್ರೀತಿಯ ಆರಾಧ್ಯ ಎಂದು ಬರೆದುಕೊಂಡಿದ್ದಾರೆ.ಮುಂಬೈಯ ಧೀರುಬಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿರುವ 8 ವರ್ಷದ ಆರಾಧ್ಯ ಬಚ್ಚನ್ ವಾರ್ಷಿಕೋತ್ಸವದಲ್ಲಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್, ಮಗಳು ಶ್ವೇತಾ ನಂದ ಜೊತೆ ಭಾಗವಹಿಸಿದ್ದರು... .. .. .. .. ://./jQ9FFrmBEZ