ಹಿರಿಯ ಕಲಾವಿದೆ ಶಬನಾ ಆಜ್ಮಿಗೆ ಮಾತೃ ವಿಯೋಗ 93 ವರ್ಷದ ಕೈಫಿ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶೈಫಿ ಕೂಡ ನಟಿ ಹಾಗೂ ರಂಗ ಕಲಾವಿದೆಯಾಗಿದ್ದು, ಅವರ ನಿಧನದ ಸುದ್ದಿಯನ್ನು ಅವರ ಅಳಿಯ ಜಾವೇದ್ ಅಖ್ತರ್ ಖಚಿತ ಪಡಿಸಿದ್ದಾರೆ. ಮುಂಬಯಿ: ಹಿರಿಯ ಕಲಾವಿದೆ ಶಬನಾ ಆಜ್ಮಿ ಅವರ ತಾಯಿ ಶೌಕತ್ ಕೈಫಿ ವಿಧಿವಶರಾಗಿದ್ದಾರೆ.93 ವರ್ಷದ ಕೈಫಿ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶೈಫಿ ಕೂಡ ನಟಿ ಹಾಗೂ ರಂಗ ಕಲಾವಿದೆಯಾಗಿದ್ದು, ಅವರ ನಿಧನದ ಸುದ್ದಿಯನ್ನು ಅವರ ಅಳಿಯ ಜಾವೇದ್ ಅಖ್ತರ್ ಖಚಿತ ಪಡಿಸಿದ್ದಾರೆ.93 ವರ್ಷದ ಶೈಫಿ ಅವರಿಗೆ ಒಂದಾದ ನಂತರ ಒಂದು ಸಮಸ್ಯೆಗಳು ಆರಂಭವಾದವು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಐಸಿಯು ನಲ್ಲಿದ್ದರು ಅನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.,ಆದರೆ ಎರಡು ದಿನಗಳ ಹಿಂದೆ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು, ಅವರ ಆಸೆಯಂತೆ ಅವರು ವಾಸಿಸುತ್ತಿದ್ದ ಕೊಠಡಿಗೆ ಕರೆತಂದವು. ಅದಾದ ನಂತರ ಅವರು ಕೊನೆಯುಸಿರೆಳೆದಿದ್ದಾರೆ.