ಬಾಕ್ಸ್ ಆಫೀಸ್ ನಲ್ಲಿ ಜವಾನ್ ದಾಖಲೆ ಗಳಿಕೆ: ಪಠಾಣ್, ಕೆಜಿಎಫ್ 2 ದಾಖಲೆ ಪತನ ನಟ ಶಾರುಖ್ ಖಾನ್ ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ. ಮುಂಬೈ: ನಟ ಶಾರುಖ್ ಖಾನ್ ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ. ಹೌದು.. ತಮಿಳು ಸಿನಿಮಾ () ಡೈರೆಕ್ಟರ್ ಅಟ್ಲಿ () ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ ( ) ಜವಾನ್ () ಬಾಕ್ಸ್ ಆಫೀಸ್ ( ) ಕೊಳ್ಳೆ ಹೊಡೆಯುತ್ತಿದ್ದು, ಜವಾನ್ ಸಿನಿಮಾ ಬಾಲಿವುಡ್ನಲ್ಲಿ ಆಲ್ ಟೈಮ್ ಬಿಗ್ಗೆಸ್ಟ್ ಓಪನರ್ ಎಂಬ ಕೀರ್ತಿಗೆ ಭಾಜನವಾಗಿದೆ. ಹಿಂದಿಯಲ್ಲಿ ಮೊದಲ ದಿನ ಸಿನಿಮಾ ಈ ರೀತಿ ದಾಖಲೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.ಇದನ್ನೂ ಓದಿ: ಶಾರುಖ್ ಖಾನ್ 'ಸಿನಿಮಾದ ದೇವರು': ಜವಾನ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್!ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜವಾನ್ ಚಿತ್ರ ಮೊದಲ ದಿನ ಭರ್ಜರಿ 65 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಇಲ್ಲಿಯವರೆಗೆ ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಜವಾನ್ ಪಾತ್ರವಾಗಿದೆ. ಅಂತೆಯೇ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಗಳಿಸಿದ ಮೊತ್ತ 75 ಕೋಟಿ ರೂಗಳಾಗಿದ್ದು, ಹಿಂದಿಯಲ್ಲಿ ಮೊದಲ ದಿನ 65 ಕೋಟಿ, ತಮಿಳಿನಲ್ಲಿ 5 ಕೋಟಿ ಹಾಗೂ ತೆಲುಗಿನಲ್ಲಿ 5 ಕೋಟಿ ಗಳಿಸಿದೆ. ‘’ … … # , … [# ] #… 1 … #: 65.50 [19.09% #] #: 55 #KGF2 #: 53.95 … ../e30uSuy1jcಜವಾನ್‌ ಮೊದಲ ದಿನದ ಗಳಿಕೆ ಕುರಿತು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜವಾನ್ ಮೊದಲ ದಿನವೇ ಭರ್ಜರಿ ಸಿಕ್ಸರ್ ಹೊಡೆದಿದ್ದು, ಬಾಲ್ ಕ್ರೀಡಾಂಗಣದ ಹೊರಗೆ ಹಾರಿದೆ. ಭಾರತದಲ್ಲಿ ಎಲ್ಲಾ ಹಿಂದಿನ ದಾಖಲೆಗಳ ಮುರಿದು ಬಿಗ್ಜೆಸ್ಟ್ ಓಪನರ್ [ಹಿಂದಿ ಚಲನಚಿತ್ರಗಳು] ಎನಿಸಿಕೊಂಡಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಶ್ಮೀರದಲ್ಲಿ 'ಜವಾನ್' ಅಬ್ಬರ; ಕಣಿವೆಯ ಏಕೈಕ ಮಲ್ಟಿಪ್ಲೆಕ್ಸ್ ವಾರಾಂತ್ಯದವರೆಗೂ ಹೌಸ್‌ಫುಲ್!ಅಂತೆಯೇ ಜವಾನ್ ಹಿಂದಿಯಲ್ಲಿ ಮೊದಲ ದಿನ 65.50 ಕೋಟಿ ರೂ ಗಳಿಸಿದ್ದು, ಇದು ಶಾರುಖ್ ರ ಈ ಹಿಂದಿನ ಚಿತ್ರ ಪಠಾಣ್ ಗಿಂತ ಶೇ.19.09 ರಷ್ಟು ಎಂದು ಹೇಳಿದ್ದಾರೆ. ಪಠಾಣ್ ಮೊದಲ ದಿನ 55 ಕೋಟಿ ರೂ ಗಳಿಸಿದ್ದರೆ, ಕನ್ನಡದ ಕೆಜಿಎಫ್2 ಹಿಂದಿ ಭಾಷೆಯಲ್ಲಿ 53.95 ಕೋಟಿ ರೂ ಗಳಿಸಿತ್ತು. ಅಂತೆಯೇ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ವಾರ್ ಚಿತ್ರ 51.60 ಕೋಟಿ ರೂ ಗಳಿಸಿತ್ತು. ಇದು ಈ ವರೆಗಿನ ಹಿಂದಿಯ ಅತ್ಯಧಿಕ ಗಳಿಕೆ ಅಂಕಿ ಅಂಶವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹೈ ಆ್ಯಕ್ಷನ್ ಥ್ರಿಲ್ಲರ್ ಆಗಿ ಮೂಡಿಬಂದಿರುವ ಜವಾನ್ ಸಿನಿಮಾ ಸಮಾಜದಲ್ಲಿರುವ ಅನ್ಯಾಯಗಳನ್ನು, ತಪ್ಪುಗಳನ್ನು ತಿದ್ದಲು ಬರುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಸರ್ಕಾರ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಆರೋಗ್ಯ ಇಲಾಖೆ, ಸೈನಿಕ ಶಸ್ತ್ರಾಸ್ತ್ರಗಳಲ್ಲಿ ತೊಂದರೆಗಳು, ವಸತಿ ಪ್ರದೇಶದ ಹತ್ತಿರದಲ್ಲಿರುವ ಅಪಾಯಕಾರಿ ಕಾರ್ಖಾನೆಗಳು ಇತ್ಯಾದಿ ವಿಚಾರಗಳತ್ತ ಚಿತ್ರ ಬೆಳಕು ಚೆಲ್ಲುತ್ತದೆ. ಸಿನಿಮಾವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದ್ದು ಇದನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹಾಗೂ ಗೌರವ್ ವರ್ಮಾ ನಿರ್ಮಿಸಿದ್ದಾರೆ.ಇದನ್ನೂ ಓದಿ: 'ಜವಾನ್' ಬಿಡುಗಡೆ ಮುನ್ನ ತಿರುಪತಿ ಬಾಲಾಜಿ ಮೊರೆ ಹೋದ ಬಾಲಿವುಡ್ ನಟ ಶಾರೂಕ್ ಖಾನ್, ವಿಡಿಯೊ ನೋಡಿಶಾರುಖ್ ಅವರ ಜೊತೆ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ ಕೂಡಾ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ, ಸಂಜೀತಾ ಭಟ್ಟಾಚಾರ್ಯ, ಆಲಿಯಾ ಖುರೇಷಿ ನಟಿಸಿದ್ದಾರೆ.