ದೆಹಲಿಯಲ್ಲಿ ಮಹಿಳೆ ಸುರಕ್ಷಿತಳಲ್ಲ: ಸೋನಂ ಕಪೂರ್ ಎಂಎನ್‌ಸಿಯ ಮಹಿಳಾ ಉದ್ಯೋಗಿ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರವೆಸಗಿರುವ... ಮುಂಬೈ: ಎಂಎನ್‌ಸಿಯ ಮಹಿಳಾ ಉದ್ಯೋಗಿ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರವೆಸಗಿರುವ ಘಟನೆಯನ್ನು ಖಂಡಿಸಿರುವ ಬಾಲಿವುಡ್ ನಟಿ ಸೋನಂ ಕಪೂರ್, ದೆಹಲಿ ಮಹಿಳೆಗೆ ಸುರಕ್ಷಿತ ತಾಣವಲ್ಲ ಎಂದು ಹೇಳಿದ್ದಾರೆ. ಈ ರೀತಿ ಘಟನೆಗಳು ಇದೇ ಮೊದಲು ಆಗುತ್ತಿಲ್ಲ. ದೆಹಲಿಯಲ್ಲಿ ಇಂತಹ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಆದರೆ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಇಲ್ಲಿ ನಿರಂತರವಾಗಿ ಮಹಿಳಾ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೇಳಬೇಕಾದರೆ, ಮಹಿಳೆಗೆ ದೆಹಲಿ ಸುರಕ್ಷಿತ ತಾಣವಲ್ಲ ಎಂದು ಅವರು ತಿಳಿಸಿದ್ದಾರೆ. ದೆಹಲಿಗೆ ಹೋಲಿಸಿದರೆ, ಮುಂಬೈನಲ್ಲಿ ಮಹಿಳೆಯರಿಗೆ ಸುರಕ್ಷಿತವಿದೆ. ಇಲ್ಲಿ ಯೂಬರ್ ಕ್ಯಾಂಬ್ ಕಂಪನಿ ತಪ್ಪೇನಿಲ್ಲ. ಇಲ್ಲಿ ಡ್ರೈವರ್ ಅತ್ಯಾಚಾರವೆಸಗಿದ್ದಾನೆ. ಇದರ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು. ಸರ್ಕಾರವೇ ಇದಕ್ಕೆ ಹೊಣೆಯಾಗುತ್ತದೆ. ಸರ್ಕಾರ ಅಗತ್ಯ ಕ್ರಮಕೈಗೊಂಡು ಇಂತಹ ಘಟನೆಗಳನ್ನು ತಡೆಯಬೇಕು. ಮಹಿಳೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.