ಕಂಗನಾ ತೋಡುತ್ತಿರುವ ಖೆಡ್ಡಾ ಅದೃಷ್ಟ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ; ಆಡಿದ್ದೆಲ್ಲವೂ ವೇದವಾಗುತ್ತದೆ. ಒಂದು ಕ್ಷಣ ಹೆಜ್ಜೆ ತಪ್ಪಿದರೆ ಆ ವ್ಯಕ್ತಿಯ ಪತನವನ್ನು... ಅದೃಷ್ಟ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ; ಆಡಿದ್ದೆಲ್ಲವೂ ವೇದವಾಗುತ್ತದೆ. ಒಂದು ಕ್ಷಣ ಹೆಜ್ಜೆ ತಪ್ಪಿದರೆ ಆ ವ್ಯಕ್ತಿಯ ಪತನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಬಾಲಿವುಡ್‍ನಂಥ ಕೀರ್ತಿ ಹಣದ ಏಣಿಯಾಟದ ರಂಗದಲ್ಲಿ ಇನ್ನೊಬ್ಬನ ಏಳಿಗೂ ಬೀಳಿಗೂ ಹದ್ದಿನಂತೆ ಕಾಯುತ್ತಿರುವವರಿರುತ್ತಾರೆ. ಇನ್ನು ತನ್ನ ಬಾವಿಯನ್ನು ತಾನೇ ತೋಡಿಕೊಂಡರೆ? ಯಶಸ್ಸಿನ ಕ್ವೀನ್ ಕಂಗನಾ ರನೌತ್ ಇಂಥ ಜಾರುದಾರಿಯಲ್ಲಿ ಪ್ರಯಾಣಿಸುತ್ತಿರುವವಳಂತೆ ಕಾಣುತ್ತಾಳೆ. ಇಲ್ಲಿ ಜತೆಗಾರರನ್ನು ಮಾಡಿಕೊಳ್ಳುವುದು ಕಷ್ಟ. ಅಂಥವರನ್ನು ದೂರ ಮಾಡಿಕೊಂಡರೆ ಇನ್ನಷ್ಟು ಕಷ್ಟ. ತನ್ನ ದಿಟ್ಟ ಹೇಳಿಕೆಗಳಿಂದಾಗಿ ಗೆಳೆಯರನ್ನು ಶತ್ರುಗಳಾಗಿಸಿಕೊಳ್ಳುವ, ಶತ್ರುಗಳನ್ನು ಇನ್ನಷ್ಟು ಕ್ರುದ್ಧರಾಗಿಸುವ ಹಂತದಲ್ಲಿ ಈಕೆ ನಿಂತಿರುವಂತೆ ಕಾಣಿಸುತ್ತದೆ. ಉದಾಹರನೆಗೆ: ಕ್ವೀನ್ ಚಿತ್ರದಲ್ಲಿ ತನ್ನ ನಟನೆ ತನ್ನ ಸಹನಟರಿಗಿಂತ ಚೆನ್ನಾಗಿತ್ತು ಎಂಬ ಹೇಳಿಕೆ. ಅದರ ಹೀರೋ ಅರ್ಜುನ್ ರಾಂಪಾಲ್‍ಗೆ ಹೇಗಾಗಬೇಡ? ಇನ್ನು ಮೊನ್ನೆ ಮೊನ್ನೆ ತಾನೇ ಈಕೆ ನೀಡಿದ 'ದುಡ್ಡು ಸಿಕ್ಕಿದರೆ ಕೆಲವು ನಟಿಯರು ಎಂಥ ಜಾಹಿರಾತಿನಲ್ಲೂ ನಟಿಸುತ್ತಾರೆ' ಎಂಬ ಹೇಳಿಕೆಯಂತೂ ತುಂಬ ಅಪಾಯಕಾರಿಯಾಗಿತ್ತು. ಸಾರ್ವಜನಿಕ ಸಂಪರ್ಕದ ವಿಚಾರದಲ್ಲಿ ಈಕೆ ದುಡುಕುತ್ತಾಳೆ. ಮೈಕ್ ಸಿಕ್ಕರೆ ಸಿಕ್ಕಾಪಟ್ಟೆ ಮಾತಾಡುತ್ತಾಳೆ ಎಂಬ ಆರೋಪವಿದೆ. ಚಿತ್ರೀಕರಣದ ವೇಳೆ ಕೆಲ ನಟಿಯರು ಮೂಗು ತೂರಿಸುತ್ತಾರೆ ಎಂಬ ಈಕೆಯ ಹೇಳಿಕೆ ದೀಪಿಕಾಳನ್ನು ಕೆರಳಿಸುವಂತಿತ್ತು. ತಾರೆಯರು ಮತ್ತವರ ಗೆಳೆಯರ ಬಗ್ಗೆ ಟೀಕೆ, ಪ್ರಶಸ್ತಿಗಳಿಗೆಲ್ಲಾ ನಾನು ಲೆಕ್ಕಿಸುವುದಿಲ್ಲ ಎಂಬ ಮಾತು, ಪುರುಷ ಸಹೋದ್ಯೋಗಿಗಳಿಗಿಂತ ತಾನು ಹೆಚ್ಚು ಪರಿಶ್ರಮಪಡುತ್ತೇನೆ ಎಂಬ ಹೇಳಿಕೆಗಳೆಲ್ಲಾ ತನ್ನ ಖೆಡ್ಡಾ ತಾನೇ ತೋಡಿಕೊಂಡಂತಿತ್ತು. ಈಗೇನೋ ಕಂಗನಾ ಯುಗ ನಡೆಯುತ್ತಿದೆ. ಈಕೆಯ ಪ್ರತಿಭೆ ನೋಡುಗ ವಿಮರ್ಶಕರ ಮನ್ನಣೆ ಪಡೆದಿದೆ. ಈ ಎತ್ತರವನ್ನು ಆಕೆ ಹಾಗೇ ಉಳಿಸಿಕೊಳ್ಳಲಿ. ಅಲ್ಲಿಂದ ಜಾರಲುಒಂದು ಸ್ಲಿಪ್ ಸಾಕು.