'ಜಸ್ಬಾ' ಮೊದಲ ನೋಟ; ವಕೀಲೆಯಾಗಿ ಐಶ್ವರ್ಯ ರೈ ಬಾಲಿವುಡ್ ನಟಿ ಐಶ್ವರ್ಯ ರೈ ಐದು ವರ್ಷಗಳ ವಿರಾಮದ ನಂತರ 'ಜಸ್ಬಾ' ಸಿನೆಮಾದ ಮೂಲಕ ಸಿನೆಮಾ ರಂಗಕ್ಕೆ ಹಿಂದಿರುಗಿದ್ದರೆ. ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಐದು ವರ್ಷಗಳ ವಿರಾಮದ ನಂತರ 'ಜಸ್ಬಾ' ಸಿನೆಮಾದ ಮೂಲಕ ಸಿನೆಮಾ ರಂಗಕ್ಕೆ ಹಿಂದಿರುಗಿದ್ದರೆ. ಕಾನ್ ಸಿನೆಮೋತ್ಸವದಲ್ಲಿ ಐಶ್ವರ್ಯ ಅವರೇ ಈ ಸಿನೆಮಾದ ಭಿತ್ತಿಚಿತ್ರ ಬಿಡುಗಡೆ ಮಾಡಿದ್ದರು. ಈಗ ನಟಿಯ ಫೇಸ್ಭುಕ್ ಅಭಿಮಾನಿಗಳ ಪುಟದಲ್ಲಿ ಸಿನೆಮಾದ ಸೆಟ್ ಗಳಿಂದ ಹೊಸ ಚಿತ್ರಗಳು ಲಭ್ಯವಾಗಿವೆ. ಗಂಭೀರ ಮುಖ ಹೊತ್ತಿರುವ ಐಶ್ವರ್ಯ ರೈ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರ ಅಕ್ಟೋಬರ್ ೯ ೨೦೧೫ಕ್ಕೆ ಬಿಡುಗಡೆಯಾಗಲಿದೆ. ಐಶ್ವರ್ಯ ಅಲ್ಲದೆ ಇರ್ಫಾನ್ ಖಾನ್ ಮತ್ತು ಶಬನ ಆಜ್ಮಿ ಕೂಡ ಈ ಸಿನೆಮಾದಲ್ಲಿ ನಟಿಸಿದ್ದಾರೆ.