'ಬ್ರಹ್ಮಾಸ್ತ್ರ: ಭಾಗ 2- ದೇವ್'ನಲ್ಲಿ ರಣಬೀರ್ ಕಪೂರ್ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಬಾಲಿವುಡ್‌ನ ಬೇಡಿಕೆಯ ನಟಿ! ಅಯನ್ ಮುಖರ್ಜಿ ನಿರ್ದೇಶನದ ಮುಂದಿನ 'ಬ್ರಹ್ಮಾಸ್ತ್ರ: ಭಾಗ 2- ದೇವ್' ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ತಾಯಿ ಅಮೃತಾ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ಚಿತ್ರದ ಆವೃತ್ತಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ. ಮುಂಬೈ: ಅಯನ್ ಮುಖರ್ಜಿ ನಿರ್ದೇಶನದ ಮುಂದಿನ 'ಬ್ರಹ್ಮಾಸ್ತ್ರ: ಭಾಗ 2- ದೇವ್' ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ತಾಯಿ ಅಮೃತಾ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ಚಿತ್ರದ ಆವೃತ್ತಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ.'ಬ್ರಹ್ಮಾಸ್ತ್ರ: ಭಾಗ 1 ಶಿವ' ಸೆಪ್ಟೆಂಬರ್ 9 ರಂದು ಬಿಡುಗಡೆಯಾಯಿತು ಮತ್ತು ನವೆಂಬರ್ 4 ರಿಂದ ಜಗತ್ತಿನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.ಬ್ರಹ್ಮಾಸ್ತ್ರ: ಭಾಗ 1 ಅನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ ಕೆಲವು ಅಭಿಮಾನಿಗಳು, ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಗುರುತಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನು 2D ಯಲ್ಲಿ ವೀಕ್ಷಿಸಿದ ಇತರರು, ನಟಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.ಆದರೆ, ಆವೃತ್ತಿಯು ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದು, ಒಂದು ದೃಶ್ಯದಲ್ಲಿ ದೀಪಿಕಾ ಅವರು ಮಗು ಶಿವನನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಈ ದೃಶ್ಯವು ಇಂಟರ್ವಲ್ ಬಳಿಕ ಬರುತ್ತದೆ. ಹಾಟ್‌ಸ್ಟಾರ್‌ ವೇದಿಕೆಯಲ್ಲಿ ಸಿನಿಮಾವನ್ನು ವೀಕ್ಷಿಸಿದ ನಂತರ ಅಭಿಮಾನಿಗಳು ಇದು ದೀಪಿಕಾ ಪಡುಕೋಣೆ ಎಂಬುದನ್ನು ಖಚಿತಪಡಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವುದಲ್ಲದೆ, ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ' - ❤️ ../0PWHvSznhpದೀಪಿಕಾ ಫೈಲ್ಸ್ ಎಂಬ ಬಳಕೆದಾರರೊಬ್ಬರು, 'ಇಲ್ಲಿ ದೀಪಿಕಾ ಪಡುಕೋಣೆಯವರ ಬ್ರಹ್ಮಾಸ್ತ್ರ: ಭಾಗ 1- ಶಿವ ಸಿನಿಮಾದ ಗ್ಲಿಂಪ್ಸ್' ಎಂದು ಬರೆದುಕೊಂಡಿದ್ದಾರೆ.ಮತ್ತೊಂದು ಟ್ವೀಟ್‌ನಲ್ಲಿ, 'ಇಂದು, ನಾನು ಎರಡನೇ ಬಾರಿಗೆ ಬ್ರಹ್ಮಾಸ್ತ್ರವನ್ನು ನೋಡಿದ್ದೇನೆ. ನಾನು ಮೊದಲು ದೀಪಿಕಾ ಪಡುಕೋಣೆಯನ್ನು ಗಮನಿಸಿರಲಿಲ್ಲ. ಆದರೆ, ಈ ಬಾರಿ ಸಿನಿಮಾದಲ್ಲಿ ಅವರು ಇದ್ದಾರೆ ಎಂಬುದು ಸ್ಫಷ್ಟವಾಗಿದೆ! ಎರಡನೇ ಭಾಗದಲ್ಲೂ ಅವರು ಇರಬೇಕು!' 'ದೀಪಿಕಾ ಪಡುಕೋಣೆ ಅವರು ಅಮೃತ ಪಾತ್ರಧಾರಿಯಾಗಿ ಬ್ರಹ್ಮಾಸ್ತ್ರ ಭಾಗ 2- ದೇವ್ ಕುತೂಹಲದಿಂದ ಕಾಯುತ್ತಿದ್ದೇವೆ' ಎಂದು ಮತ್ತೋರ್ವ ಬಳಕೆದಾರರು ಬರೆದಿದ್ದಾರೆ.ಇದನ್ನೂ ಓದಿ: ಬಾಕ್ಸ್ ಆಫೀಸ್ ಯಶಸ್ಸಿನ ಬಳಿಕ ಈಗ ಒಟಿಟಿಯತ್ತ ಸಾಗುತ್ತಿದೆ ರಣಬೀರ್ ಕಪೂರ್, ಆಲಿಯಾ ಅಭಿಯನದ 'ಬ್ರಹ್ಮಾಸ್ತ್ರ'ಬ್ರಹ್ಮಾಸ್ತ್ರ ಭಾಗ 1- ಶಿವ, ಅಯನ್ ಮುಖರ್ಜಿಯವರ ಮೊದಲ ಭಾಗ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಬ್ರಹ್ಮಾಸ್ತ್ರದ ಕಥಾಹಂದರವು ಶಿವನು ಬೆಂಕಿಯೊಂದಿಗಿನ ತನ್ನ ವಿಚಿತ್ರ ಸಂಪರ್ಕದ ಬಗ್ಗೆ ತಿಳಿದುಕೊಳ್ಳುವುದನ್ನು ತೋರಿಸಿದೆ.ಶಾರುಖ್ ಖಾನ್ ಮೊದಲ ಭಾಗದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವರದಿಗಳನ್ನು ನಂಬುವುದಾದರೆ, ಎರಡನೇ ಭಾಗದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 425 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.