ನಟ ಹೃತಿಕ್ ರೋಷನ್ ತಾಯಿಗೆ ಕೋವಿಡ್-19 ಪಾಸಿಟಿವ್ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಅವರ ತಾಯಿ ಪಿಂಕಿ ರೋಶನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿತ್ರ ನಿರ್ಮಾಪಕ ಹಾಗೂ ಪಿಂಕಿ ರೋಶನ್ ಅವರ ಪತಿ ರಾಕೇಶ್ ರೋಷನ್ ಈ ವಿಷಯವನ್ನು ತಿಳಿಸಿದ್ದಾರೆ. ಮುಂಬೈ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಅವರ ತಾಯಿ ಪಿಂಕಿ ರೋಶನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿತ್ರ ನಿರ್ಮಾಪಕ ಹಾಗೂ ಪಿಂಕಿ ರೋಶನ್ ಅವರ ಪತಿ ರಾಕೇಶ್ ರೋಷನ್ ಈ ವಿಷಯವನ್ನು ತಿಳಿಸಿದ್ದಾರೆ. 69 ವರ್ಷದ ಪಿಂಕಿ ರೋಶನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಿಜ. ಯಾವುದೇ ರೋಗ ಲಕ್ಷಣಗಳಿಲ್ಲ. ಹೋಮ್ ಕ್ವಾರಂಟೈನ್ ನಲ್ಲಿರುವುದಾಗಿ ಹೇಳಿದ್ದಾರೆ.ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದವರು ನೀಡಿದ್ದ ಗಿಫ್ಟ್ ಗಳನ್ನು ಪಿಂಕಿ ರೋಶನ್ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.# (@) 21, 2020 11:41pm PDTಮುಂಬೈನಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 2,45,871ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 9,869 ಆಗಿದೆ.